ಉಪವಾಸ ಮಾಡಿ 55 ಕೆಜಿ ತೂಕ ಇಳಿಸಿಕೊಂಡ ರಾಮ್‌ ಕಪೂರ್‌- ಹೀಗಿತ್ತು ಇವರ ಫಾಸ್ಟಿಂಗ್‌

Image Credits : Adobe Stock

By Praveen Chandra B
Jan 23, 2025

Hindustan Times
Kannada

ಬಡೇ ಅಚ್ಚೆ ಲಗ್ತೆ ಹೈ ಮತ್ತು ಕಸಮ್ ಸೆ ಇತ್ಯಾದಿ ಕಿರುತೆರೆ ಕಾರ್ಯಕ್ರಮಗಳ ಮೂಲಕ ರಾಮ್‌ ಕಪೂರ್‌ ಜನಪ್ರಿಯತೆ ಪಡೆದಿದ್ದಾರೆ. ಇದೀಗ ತೂಕ ಇಳಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ದೈನಂದಿನ ವ್ಯಾಯಾಮ, ಉಪವಾಸ ಇತ್ಯಾದಿಗಳಿಂದ  140 ಕೆಜಿ ತೂಕವಿದ್ದ 51 ವರ್ಷದ ನಟ  ಒಂದು ವರ್ಷದಲ್ಲಿ 55 ಕೆಜಿ ತೂಕವನ್ನು ಯಶಸ್ವಿಯಾಗಿ ಕಳೆದುಕೊಂಡಿದ್ದಾರೆ.

Image Credits : Adobe Stock

ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಎನ್ನುವುದು ತೂಕ ಇಳಿಸುವ ಜನಪ್ರಿಯ ವಿಧಾನ. ಆಹಾರ ಸೇವಿಸುವ ಸಮಯದ ಅಂತರ ಹೆಚ್ಚಿಸುವುದು ಇದರ ಪ್ರಮುಖ ಲಕ್ಷಣವಾಗಿದೆ. ಉದಾಹರಣೆಗೆ ಎಂಟು ಗಂಟೆಗೊಮ್ಮೆ ಆಹಾರ ಸೇವನೆ. ಇದರಿಂದ ದೇಹದ ಕೊಬ್ಬು ಕರಗುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅನಾರೋಗ್ಯಕರ ಆಹಾರ ಸೇವನೆಯ ಅಪಾಯ ಕಡಿಮೆ ಮಾಡುತ್ತದೆ. ಅಂತಿಮವಾಗಿ ತೂಕ ಇಳಿಕೆಗೆ ನೆರವಾಗುತ್ತದೆ.

ಮಧ್ಯಂತರ ಉಪವಾಸ ಎಂದರೇನು?

Image Credits : Adobe Stock

ಮಧ್ಯಂತರ ಉಪವಾಸ ಮಾಡಲು 6 ದಾರಿಗಳು

Image Credits : Adobe Stock

ಇದು ಸರಳ ಉಪವಾಸ ವಿಧಾನಗಳಲ್ಲಿ ಒಂದಾಗಿದೆ. ನೀವು ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ 12 ಗಂಟೆಗಳ ಕಾಲ ಉಪವಾಸ ಮಾಡುತ್ತೀರಿ. ಉಳಿದ 12 ಗಂಟೆಗಳ ಸಮಯದಲ್ಲಿ ಮಾತ್ರ ಆಹಾರ ಸೇವನೆ (ಮಿತವಾಗಿ) ಮಾಡುವಿರಿ. ಇದು ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಉತ್ತೇಜನ ನೀಡುತ್ತದೆ.

12 ಗಂಟೆಗಳ ಉಪವಾಸ

Image Credits : Adobe Stock

ಇದು ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ನೀವು 16 ಗಂಟೆಗಳ ಕಾಲ ಉಪವಾಸ ಮಾಡುತ್ತೀರಿ. 8 ಗಂಟೆಗಳ ಅವಧಿಯ ನಡುವೆ ಮಾತ್ರ ಆಹಾರ ಸೇವಿಸುವಿರಿ. ರಾತ್ರಿ 12ರಿಂದ ರಾತ್ರಿ 8ರವರೆಗೆ ತಿನ್ನುವುದು ಮತ್ತು ಮರುದಿನ ರಾತ್ರಿ 8 ರಿಂದ 12ರವರೆಗೆ ಉಪವಾಸ ಮಾಡುವುದು.

16/8 ಗಂಟೆ 

Image Credits : Adobe Stock

ಈ ವಿಧಾನದಲ್ಲಿ ವಾರದ ಐದು ದಿನಗಳವರೆಗೆ ಸಾಮಾನ್ಯ ಪ್ರಮಾಣದಲ್ಲಿ ತಿನ್ನುವುದು. ಉಳಿದ ಎರಡು ದಿನಗಳಲ್ಲಿ ಕ್ಯಾಲೋರಿ ಸೇವನೆ ನಿರ್ಬಂಧಿಸುವುದನ್ನು ಒಳಗೊಂಡಿದೆ.

5:2 ಆಹಾರ ಕ್ರಮ

Image Credits : Adobe Stock

ದಿನ ಬಿಟ್ಟು ದಿನ ಉಪವಾಸ ಮಾಡುವುದು. ಉಪವಾಸದ ದಿನದಲ್ಲಿ ನೀವು ತುಂಬಾ ಕಡಿಮೆ ಪ್ರಮಣದಲ್ಲಿ ಕ್ಯಾಲೋರಿ ಸೇವಿಸಬಹುದು ಅಥವಾ ಏನೂ ಸೇವಿಸದೆ ಇರಬಹುದು. ಉಪವಾಸವಿಲ್ಲದ ದಿನಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ತಿನ್ನುವಿರಿ.

ಪರ್ಯಾಯ ದಿನದ ಉಪವಾಸ

Image Credits : Adobe Stock

ಈ ವಿಧಾನವು ವಾರಕ್ಕೆ ಒಂದು ಅಥವಾ ಎರಡು ದಿನ ಪೂರ್ಣ ಪ್ರಮಾಣದಲ್ಲಿ 24 ಗಂಟೆಗಳ ಕಾಲ ಉಪವಾಸ ಮಾಡುವುದನ್ನು ಒಳಗೊಂಡಿರುತ್ತದೆ. ನೀವು ಒಂದು ದಿನ ರಾತ್ರಿ ಊಟದಿಂದ ಮರುದಿನ ರಾತ್ರಿ ಊಟದವರೆಗೆ ಉಪವಾಸ ಮಾಡಬಹುದು. ಉಪವಾಸದ ಅವಧಿಯಲ್ಲಿ, ನೀವು ನೀರು, ಚಹಾ ಮತ್ತು ಇತರ ಕ್ಯಾಲೊರಿ ಮುಕ್ತ ಪಾನೀಯಗಳನ್ನು ಸೇವಿಸಬಹುದು.

ವಾರದಲ್ಲಿ 24 ಗಂಟೆಗಳ ಉಪವಾಸ

Image Credits : Adobe Stock

ಒಂದು ಹೊತ್ತು ಮಾತ್ರ ಹೊಟ್ಟೆ ತುಂಬಾ ಊಟ ಮಾಡುವುದನ್ನು ಒಳಗೊಂಡಿರುತ್ತದೆ. ದಿನವಿಡೀ ಬಹಳ ಕಡಿಮೆ ಆಹಾರವನ್ನು (ಸಾಮಾನ್ಯವಾಗಿ ಹಣ್ಣುಗಳು, ತರಕಾರಿಗಳು) ಸೇವಿಸುವುದನ್ನು ಒಳಗೊಂಡಿರುತ್ತದೆ.

ವಾರಿಯರ್ ಡಯಟ್

Image Credits : Adobe Stock

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ