ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೌಂದರ್ಯದ ಗುಟ್ಟು ಇಲ್ಲಿದೆ 

By Reshma
Apr 28, 2025

Hindustan Times
Kannada

ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮದೇ ಆದ ಐಡೆಂಟಿಟಿ ಸೃಷ್ಟಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಈಕೆ ಸಖತ್ ಆಗಿ ಡಾನ್ಸ್ ಕೂಡ ಮಾಡ್ತಾರೆ 

ನಟನೆಯ ಜೊತೆಗೆ ಈ ಚೆಲುವೆ ತಮ್ಮ ಫಿಟ್ನೆಸ್ ಹಾಗೂ ಚರ್ಮದ ಕಾಳಜಿಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಕಲೆಗಳಿಲ್ಲದ ಅವರ ಸುಂದರ ತ್ವಚೆಯ ಗುಟ್ಟು ಹೀಗಿದೆ 

ದಿಶಾ ತಮ್ಮ ಚರ್ಮದ ಆರೈಕೆಗೆ ಪ್ರತಿದಿನ ಯಾವೆಲ್ಲಾ ಕ್ರಮ ಅನುಸರಿಸುತ್ತಾರೆ ನೋಡಿ 

ಪಿಯುಸಿವರೆಗೂ ದಿಶಾ ಮುಖ ತೊಳೆಯಲು ಫೇಶ್‌ವಾಶ್ ಬಳಸಿರಲಿಲ್ಲ. ಬದಲಾಗಿ ಕಡಲೆಹಿಟ್ಟು, ಮೊಸರನ್ನು ಹಚ್ಚುತ್ತಿದ್ದಳು 

ಕಡಲೆಹಿಟ್ಟು ಮತ್ತು ಮೊಸರನ್ನು ಮುಖಕ್ಕೆ ಹಚ್ಚಿ ಈ ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಹಾಗೆ ಬಿಡಬೇಕು, ನಂತರ ತಣ್ಣೀರಿನಿಂದ ತೊಳೆಯಬೇಕು 

ಈಗಲೂ ಬೆಳಗೆದ್ದು ಕ್ಲೆನ್ಸಿಂಗ್‌, ಟೋನಿಂಗ್, ಮಾಯಿಶ್ಚರೈಸಿಂಗ್ ಹಚ್ಚುವುದು ಮರೆತು ಹೋಗುತ್ತದೆ ಎಂದು ಆಕೆ ಹೇಳುತ್ತಾರೆ

ಆಕೆ ಯಾವಾಗಲೂ ಬಿಸಿಲಿಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಬಳಸುತ್ತಾರೆ ಹಾಗಾಗಿ ಟ್ಯಾನಿಂಗ್ ಭಯ ಅವರನ್ನು ಕಾಡುವುದಿಲ್ಲ

ಅತ್ಯುತ್ತಮ ಬ್ರ್ಯಾಂಡ್‌ನ ಮೇಕಪ್ ಐಟಂಗಳನ್ನು ಬಳಸುವ ದಿಶಾ ಮಲಗುವ ಮುನ್ನ ಮೇಕಪ್ ತೆಗೆಯುತ್ತಾರೆ, ರಾತ್ರಿ ವೇಳೆಯೂ ತ್ವಚೆಯ ಆರೈಕೆ ಮಾಡುತ್ತಾರೆ

ಅವರ ತಾಯಿಯ ಸಲಹೆಯಂತೆ ಸಾಕಷ್ಟು ನೀರು ಕುಡಿಯುತ್ತಾರೆ. ಇದರಿಂದ ತ್ವಚೆಯ ಕಳಕಳಿಯಾಗಿ ಕಾಣುತ್ತದೆ 

ವರ್ಕೌಟ್ ಮಾಡುವುದರಿಂದ ತ್ವಚೆ ಸುಧಾರಿಸುತ್ತದೆ ಎಂದು ದಿಶಾ ನಂಬಿದ್ದಾರೆ. ವ್ಯಾಯಾಮ ಮಾಡುವುದರಿಂದ ದೇಹದಿಂದ ವಿಷಾಂಶ ದೂರಾಗುತ್ತದೆ, ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ 

ಪ್ರತಿಷ್ಠಿತ ಕಾನ್‌ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ