ಬಜೆಟ್‌ಗಿಂತ 5 ಪಟ್ಟು ಹೆಚ್ಚು ಗಳಿಕೆ ಕಂಡ ಸೂಪರ್‌ಹಿಟ್‌ ಹಿಂದಿ ಸಿನಿಮಾಗಳು 

By Reshma
Apr 27, 2025

Hindustan Times
Kannada

ಕೆಲವು ಸಿನಿಮಾಗಳಿಗೆ ಕೋಟಿಗಟ್ಟಲೆ ಸುರಿದರೂ ಹಾಕಿದ ಹಣವೂ ವಾಪಾಸ್ ಬರುವುದಿಲ್ಲ. ಇನ್ನೂ ಕೆಲವು ಬಜೆಟ್‌ಗಿಂತ ಸಾಕಷ್ಟು ಹೆಚ್ಚು ಗಳಿಕೆ ಮಾಡುತ್ತವೆ 

ಹೂಡಿಕೆ ಮಾಡಿದ ಬಜೆಟ್‌ಗಿಂತ 5 ಪಟ್ಟು ಹೆಚ್ಚು ಗಳಿಕೆ ಕಂಡ ಬಾಲಿವುಡ್ ಸಿನಿಮಾಗಳು ಯಾವುವು ನೋಡಿ  

ಹಮ್ ಆಪ್‌ಕೆ ಹೇ ಕೌನ್‌: ಇದು ಸಲ್ಮಾನ್ ಖಾನ್ ಅವರ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ. ಈ ಸಿನಿಮಾಕ್ಕೆ 6 ಕೋಟಿ ಹೂಡಿಕೆ ಮಾಡಲಾಗಿತ್ತು, ಇದು ವಿಶ್ವದಾದ್ಯಂತ 128 ಕೋಟಿ ಗಳಿಕೆ ಮಾಡಿತು

ನಟ ಸಲ್ಮಾನ್ ಖಾನ್ ಅವರ ‘ಮೇನೆ ಪ್ಯಾರ್ ಕಿಯಾ‘ ಚಿತ್ರಕ್ಕೆ 2 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿತ್ತು. ಈ ಚಿತ್ರ ವಿಶ್ವದಾದ್ಯಂತ ಬರೋಬ್ಬರಿ 45 ಕೋಟಿ ಗಳಿಸಿತು  

ರಂಗೀಲಾ: ಅಮೀರ್‌ ಖಾನ್ ಅವರ ರಂಗೀನಾ ಚಿತ್ರ ಕೂಡ 5 ಪಟ್ಟು ಹೆಚ್ಚು ಗಳಿಕೆ ಕಂಡಿತ್ತು. 4.5 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ 33 ಕೋಟಿ ಗಳಿಸಿತು 

ಗದರ್‌–ಏಕ್ ಪ್ರೇಮ್ ಕಥಾ: ಸನ್ನಿ ಡಿಯೋಲ್ ನಟನೆಯ ಈ ಚಿತ್ರ 19 ಕೋಟಿ ಹೂಡಿಕೆ ಮಾಡಿ, 133 ಕೋಟಿ ಗಳಿಸಿತ್ತು 

ತ್ರಿ ಈಡಿಯೆಟ್ಸ್‌: 55 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರವು ಒಟ್ಟು ವಿಶ್ವದಾದ್ಯಂತ 349 ಕೋಟಿ ಗಳಿಕೆ ಮಾಡಿತ್ತು 

ಮುನ್ನಾ ಭಾಯಿ ಎಂಬಿಬಿಎಸ್‌: ಸಂಜತ್‌ದತ್ ನಟನೆಯ ಈ ಚಿತ್ರಕ್ಕೆ ಕೇವಲ 10 ಕೋಟಿ ಹೂಡಿಕೆ ಮಾಡಲಾಗಿತ್ತು. ಇದು 33 ಕೋಟಿ ಗಳಿಕೆ ಮಾಡಿತ್ತು 

ನೋ ಎಂಟ್ರಿ: ಅನಿಲ್ ಕಪೂರ್‌, ಸಲ್ಮಾನ್ ಖಾನ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು 25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರ ಒಟ್ಟು ಗಳಿಕೆ 77 ಕೋಟಿ. 

ಖೋಸ್ಲಾ ಕಾ ಗೋಸ್ಲಾ: ಭೂಮಾಫಿಯಾ ಅಟ್ಟಹಾಸದ ಕಥೆಯನ್ನು ಆಧರಿಸಿದ ಈ ಚಿತ್ರ 3 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು, ಆದರೆ ಇದು ಅಭಿಮಾನಿಗಳ ಹೃದಯ ಗೆದ್ದು ಸೂಪರ್ ಹಿಟ್ಟ ಎನ್ನಿಸಿತು 

ಜಬ್ ವಿ ಮೆಟ್: ಶಾಹಿದ್ ಕಪೂರ್‌, ಕರೀನಾ ಕಪೂರ್ ನಟನೆಯ ಈ ಚಿತ್ರ 15 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, 50 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು 

ಕಹಾನಿ: ವಿದ್ಯಾ ಬಾಲನ್ ನಟನೆಯ ಕಹಾನಿ ಚಿತ್ರ 8 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, 80 ಕೋಟಿ ರೂ ಗಳಿಕೆ ಕಂಡಿತ್ತು 

ಕಾಶ್ಮಿರ್ ಫೈಲ್ಸ್‌: 25 ಕೋಟಿಯಷ್ಟು ಹೂಡಿಕೆ ಮಾಡಿದ್ದು ಈ ಚಿತ್ರವು ಬರೋಬ್ಬರಿ 350 ಕೋಟಿ ಗಳಿಸಿದೆ 

ಪ್ರತಿಷ್ಠಿತ ಕಾನ್‌ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ