ಭಾರತ vs ಆಸ್ಟ್ರೇಲಿಯಾ ಮುಖಾಮುಖಿ ದಾಖಲೆ

By Prasanna Kumar P N
Nov 21, 2024

Hindustan Times
Kannada

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ನವೆಂಬರ್ 22ರಿಂದ ಬೆಳಿಗ್ಗೆ 7.50ಕ್ಕೆ ಪ್ರಾರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಉಭಯ ತಂಡಗಳ ಟೆಸ್ಟ್ ಕ್ರಿಕೆಟ್​ನ ಮುಖಾಮುಖಿ ದಾಖಲೆ ಹೇಗಿದೆ ಎನ್ನುವುದನ್ನು ಈ ಮುಂದೆ ನೋಡೋಣ.

ಆದರೆ ಆಸೀಸ್ ತಂಡವೇ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ. ಭಾರತ ತಂಡ ಅತ್ಯಧಿಕ ಪಂದ್ಯಗಳನ್ನು ಕೈ ಚೆಲ್ಲಿದೆ.

ಇಂಡೋ-ಆಸೀಸ್ ಒಟ್ಟು 107 ಪಂದ್ಯಗಳಲ್ಲಿ ಸೆಣಸಾಟ ನಡೆಸಿವೆ. ಈ ಪೈಕಿ ಆಸ್ಟ್ರೇಲಿಯಾ 45 ಪಂದ್ಯಗಳಲ್ಲಿ ಜಯಿಸಿದೆ. 

ಭಾರತ ತಂಡವು ಗೆದ್ದಿರುವುದು ಕೇವಲ 32 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಒಟ್ಟು 29 ಪಂದ್ಯಗಳು ಡ್ರಾಗೊಂಡಿವೆ.

ಟೀಮ್ ಇಂಡಿಯಾ ಗೆಲುವಿನ ಸರಾಸರಿ ಶೇ. 29.90, ಆಸ್ಟ್ರೇಲಿಯಾ ತಂಡದ ಗೆಲುವಿನ ಸರಾಸರಿ 42.05.

ಭಾರತ ತಂಡ, ಆಸೀಸ್ ವಿರುದ್ಧ 4-0 ಅಂತರದಲ್ಲಿ ಗೆಲ್ಲುವುದು ಮುಖ್ಯವಾಗಿದೆ. 

ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ತಂಡ ಸೋಲು ಕಾಣಬಾರದು. ಒಂದು ಪಂದ್ಯ ಸೋತರೂ ಫೈನಲ್ ಕನಸು ಭಗ್ನ.

ಪರ್ತ್​ ಟೆಸ್ಟ್​​ನಲ್ಲಿ ಭಾರತ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ರೋಹಿತ್​ ಶರ್ಮಾ ಅಲಭ್ಯರಾಗಲಿದ್ದಾರೆ.

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP