ಬದನೆಕಾಯಿ ಬೇಡ ಎನ್ನುವವರೂ ಈ ಕಟ್ಲೆಟ್‌ ಇಷ್ಟ ಪಟ್ಟು ಸೇವಿಸುತ್ತಾರೆ

By HT Kannada Desk
Apr 01, 2024

Hindustan Times
Kannada

ಬದನೆಕಾಯಿಂದ ಬಾಯಲ್ಲಿ ನೀರೂರುವ ಕಟ್ಲೆಟ್‌ ತಯಾರಿಸಬಹುದು

ಪ್ರತಿದಿನ ನೀವು ಒಂದೇ ರೀತಿಯ ಸ್ನಾಕ್ಸ್‌ ತಿಂದು ಬೇಸರ ಎನಿಸಿದಲ್ಲಿ ಒಮ್ಮೆ ಬದನೆಕಾಯಿ ಕಟ್ಲೆಟ್‌ ಟ್ರೈ ಮಾಡಿ

ಕತ್ತರಿಸಿದ ಬದನೆಕಾಯಿ ತುಂಡು - 2 ಕಪ್‌  ಆಲೂಗಡ್ಡೆ - 1 ಕಪ್‌ ಕತ್ತರಿಸಿದ ಬೀನ್ಸ್‌ -1/2 ಕಪ್‌  ಕತ್ತರಿಸಿದ ಕ್ಯಾರೆಟ್‌ - 1/4 ಕಪ್‌  ಕತ್ತರಿಸಿದ ಕೊತ್ತಂಬರಿ ಸೊಪ್ಪು - 2 ಟೇಬಲ್‌ ಸ್ಪೂನ್‌ ಪುದಿನಾ  - 1 ಟೇಬಲ್‌ ಸ್ಪೂನ್‌ ಹಸಿಮೆಣಸಿನಕಾಯಿ - 4

ಕತ್ತರಿಸಿದ ಈರುಳ್ಳಿ ಚೂರು - 2 ಕಪ್‌ ಶುಂಠಿ ಪೇಸ್ಟ್‌ - 2 ಟೇಬಲ್‌ ಸ್ಪೂನ್‌ ಆಮ್‌ ಚೂರ್‌- 1/2 ಟೀ ಸ್ಪೂನ್‌ ಬ್ರೆಡ್‌ ಕ್ರಮ್ಸ್‌ - 2 ಟೇಬಲ್‌ ಸ್ಪೂನ್‌ ಉಪ್ಪು - ರುಚಿಗೆ ತಕ್ಕಷ್ಟು ಎಣ್ಣೆ - ಕರಿಯಲು

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಕತ್ತರಿಸಿದ ಈರುಳ್ಳಿ, ಆಲೂಗಡ್ಡೆ, ಬೀನ್ಸ್‌, ಕ್ಯಾರೆಟ್‌, ಸ್ವಲ್ಪ ಉಪ್ಪು ಸೇರಿಸಿ ಫ್ರೈ ಮಾಡಿ. ಇದು ಮೆತ್ತಗಾದ ನಂತರ ಸ್ಟೌವ್‌ನಿಂದ ಇಳಿಸಿ. 

ಈಗ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಸೇರಿಸಿ ಪೇಸ್ಟ್‌ ಮಾಡಿಕೊಂಡು ಇದಕ್ಕೆ ಫ್ರೈ ಮಾಡಿದ ತರಕಾರಿಯನ್ನು ಸೇರಿಸಿ

ಇದರೊಂದಿಗೆ ಗರಂ ಮಸಾಲೆ, ಆಮ್‌ಚೂರ ಪೌಡರ್‌, ಕೊತ್ತಂಬರಿ ಸೊಪ್ಪು, ಪುದೀನಾ, ಉಪ್ಪು, ತರಕಾರಿಗಳ ಮಿಶ್ರಣ ಸೇರಿಸಿ ಮಿಕ್ಸ್‌ ಮಾಡಿ

ಈ ಮಿಶ್ರಣದಿಂದ ಸಣ್ಣ ಕಟ್ಲೆಟ್‌ಗಳನ್ನಾಗಿ ಮಾಡಿಕೊಂಡು ಎರಡೂ ಕಡೆ ಕಂದು ಬಣ್ಣ ಬರುವರೆಗೂ ಕರಿಯಿರಿ

ಗ್ರೀನ್‌ ಚಟ್ನಿಯೊಂದಿಗೆ ಬದನೆಕಾಯಿ ಕಟ್ಲೆಟನ್ನು ಸವಿಯಲು ಕೊಡಿ

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ