ತ್ವರಿತವಾಗಿ ಪರ್ಸನಲ್‌ ಲೋನ್‌ ಪಡೆಯಲು 5 ಸುಲಭ ಹಂತಗಳು

By Praveen Chandra B
Jan 08, 2025

Hindustan Times
Kannada

ಆನ್‌ಲೈನ್‌ನಲ್ಲಿ ತ್ವರಿತವಾಗಿ ಸಾಲ ಪಡೆಯುವುದು ಅಸುರಕ್ಷಿತ. ಆದರೆ, ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ತ್ವರಿತ ಸಾಲದ ಅವಶ್ಯಕತೆ ಇರುತ್ತದೆ. 

PEXELS

ಆನ್‌ಲೈನ್‌ನಲ್ಲಿ ತ್ವರಿತವಾಗಿ ಪರ್ಸನಲ್‌ ಲೋನ್‌ ಪಡೆಯಲು ಕೆಲವು ಸುಲಭ ಹಂತಗಳು ಇಲ್ಲಿವೆ.

PEXELS

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ. ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ. 

PEXELS

ಅರ್ಹತೆ ಪರಿಶೀಲನೆ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಬ್ಯಾಂಕ್‌ನವರು ನಿಮ್ಮ ವಿವರ ಪರಿಶೀಲಿಸುತ್ತಾರೆ. ಕೆಲವೊಮ್ಮೆ ಪ್ರೀ ಅಪ್ರೂವ್ಡ್‌  ಲೋನ್‌ ತಕ್ಷಣ ದೊರಕಬಹುದು. 

PEXELS

ಸಾಲದ ಮೊತ್ತ ಮತ್ತು ಅವಧಿ: ನಿಮ್ಮ ಬಜೆಟ್ ಮತ್ತು ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಸಾಲದ ಮೊತ್ತ ಮತ್ತು ಮರುಪಾವತಿ ಅವಧಿ ಆಯ್ಕೆ ಮಾಡಿ.

PINTEREST

ಕೆವೈಸಿ ಮತ್ತು ದಾಖಲೆ: ಸಾಲ ನೀಡುವ ಬ್ಯಾಂಕ್‌ಗೆ ಅಗತ್ಯವಿರುವ ಗುರುತಿನ ಪುರಾವೆ, ವಿಳಾಸ, ಆದಾಯ ದಾಖಲೆಗಳನ್ನು ಅಪ್ಲೋಡ್‌ ಮಾಡುವ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.

ಸಾಲ ವಿತರಣೆ: ಬ್ಯಾಂಕ್‌ ನಿಮಗೆ ಸಾಲದ ಮೊತ್ತವನ್ನು ಕೆಲವು ಗಂಟೆಗಳಲ್ಲಿ ನೀಡಬಹುದು. ಕೆಲವೊಮ್ಮೆ ಈ ಪ್ರಕ್ರಿಯೆಗೆ 24 ಗಂಟೆಗಳು ಬೇಕಾಗಬಹುದು.

PINTEREST

ಪೇರಳೆ ಎಲೆ ರಸ ಕುಡಿಯುವುದರ ಆರೋಗ್ಯ ಪ್ರಯೋಜನಗಳು