ಕ್ರಿ.ಶ. 3000ನೇ ಇಸವಿಯಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್‌ಗಳು- ಕಲಾವಿದರ ಕಲ್ಪನೆ ಹೀಗಿದೆ
By Umesh Kumar S Jan 25, 2025
Hindustan Times Kannada
ಭವಿಷ್ಯದ ರಾಯಲ್ ಎನ್ ಫೀಲ್ಡ್ ಬೈಕ್‌ಗಳು ಹೇಗಿರಬಹುದು ಎಂದು ನೀವು ಎಂದಾದರೂ ಊಹಿಸಿದ್ದೀರಾ
ರಾಯಲ್ ಎನ್ಫೀಲ್ಡ್ ಆರ್ಟ್ ಆಫ್ ಮೋಟಾರ್ ಸೈಕ್ಲಿಂಗ್ ಸ್ಪರ್ಧೆ ಸೀಸನ್ 4 ರಲ್ಲಿ ಹಲವಾರು ಕಲಾವಿದರು ಮತ್ತು ವಿನ್ಯಾಸಕಾರರಿಗೆ ತಮ್ಮ ಕಲ್ಪನೆಯ ಚಿತ್ರ ಬಿಡಿಸಲು ಅವಕಾಶ ನೀಡಲಾಗಿತ್ತು.
ಕ್ರಿ.ಶ. 3000 ನೇ ಇಸವಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಭೂಮಿಯನ್ನು ಮೀರಿದ ಜಗತ್ತಿನ ಸಂಪರ್ಕಕೊಂಡಿಯಾಗಿ ಊಹಿಸಿಕೊಳ್ಳುವಂತೆ ಕಲಾವಿದರು, ವಿನ್ಯಾಸಕಾರರಿಗೆ ಹೇಳಲಾಗಿತ್ತು.
ಪ್ರತಿಯೊಂದು ನಿರೂಪಣೆಯು ಎರಡು ಚಕ್ರಗಳ ಮೇಲೆ ಕಾಲಾತೀತ ಅನ್ವೇಷಣೆಯ ಮನೋಭಾವದ ಕಲ್ಪನೆಯ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ನೀಡಿತು
ಜೆನ್ ಎಐ, ಡಿಜಿಟಲ್ ಆರ್ಟ್, ಕರಕುಶಲ ಮತ್ತು ಕಾಮಿಕ್ ಆರ್ಟ್ ಎಂಬ 4 ವಿಭಾಗಗಳಲ್ಲಿ ಕಲಾಕೃತಿಗಳನ್ನು ರಚಿಸಲು ಅವಕಾಶ ನೀಡಲಾಗಿತ್ತು
ಥೈಲ್ಯಾಂಡ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಜಪಾನ್, ಮಲೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ, ಕೊಲಂಬಿಯಾ ಮತ್ತು ಮೆಕ್ಸಿಕೊದಿಂದ ಮಹತ್ವಾಕಾಂಕ್ಷಿ ಕಲಾವಿದರು ಭಾಗವಹಿಸಿದ್ದರು
42,000 ಕ್ಕೂ ಹೆಚ್ಚು ಕಲಾಕೃತಿಗಳು ರಚನೆಯಾಗಿವೆ.ಇದು ಕಳೆದ ವರ್ಷಕ್ಕಿಂತ ಶೇ 19 ಹೆಚ್ಚು. ಕಲಾವಿದರ ಸಂಖ್ಯೆ ಶೇ 48 ಹೆಚ್ಚಳವಾಗಿದೆ.
ಕಾಮಿಕ್ ಆರ್ಟ್ ವಿಭಾಗದ ವಿಜೇತರು ರಾಯಲ್ ಎನ್‌ಫೀಲ್ಡ್ ಕಂಪನಿಯ ಭವಿಷ್ಯದ ಕಾಮಿಕ್ ಪುಸ್ತಕಗಳಲ್ಲಿ ಚಿತ್ರಬಿಡಿಸುವ ಅವಕಾಶ ಪಡೆಯಲಿದ್ದಾರೆ.
ರಾಯಲ್ ಎನ್ ಫೀಲ್ಡ್ ಆರ್ಟ್ ಆಫ್ ಮೋಟಾರ್ ಸೈಕ್ಲಿಂಗ್ ಸ್ಪರ್ಧೆಯು ಈ ವರ್ಷವೂ ಇರಲಿದೆ.