ಫೆಬ್ರುವರಿಯಲ್ಲಿ 1.84 ಲಕ್ಷ ಕೋಟಿ ರೂ GST ಸಂಗ್ರಹ; ಕರ್ನಾಟಕಕ್ಕೆ 2ನೇ ಸ್ಥಾನ
By Jayaraj
Mar 02, 2025
Hindustan Times
Kannada
2025ರ ಆರಂಭದಲ್ಲಿಯೇ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಭರ್ಜರಿಯಾಗಿ ಆಗುತ್ತಿದೆ. ಫೆಬ್ರುವರಿಯಲ್ಲಿ ಒಟ್ಟು 1.84 ಲಕ್ಷ ಕೋಟಿ ರೂ. ಜಿಎಸ್‌ಟಿ ಆದಾಯ ಹರಿದು ಬಂದಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ. 9.1 ಹೆಚ್ಚಳ ದಾಖಲಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಫೆಬ್ರುವರಿಯಲ್ಲಿ ಆದ ಒಟ್ಟು ಜಿಎಸ್‌ಟಿ ಸಂಗ್ರಹ 1,83,646 ಕೋಟಿ ರೂಪಾಯಿ. ಅದಕ್ಕೂ ಹಿಂದೆ ಜನವರಿಯಲ್ಲಿ 1,95,506 ಕೋಟಿ ರೂ. ಸಂಗ್ರಹವಾಗಿತ್ತು.
ಫೆಬ್ರುವರಿಯಲ್ಲಿ ನಿವ್ವಳ ಜಿಎಸ್‌ಟಿ ಸಂಗ್ರಹವು 8.1 ಶೇ. ಬೆಳವಣಿಗೆ ಸಾಧಿಸಿದೆ.
ಫೆಬ್ರುವರಿಯಲ್ಲಿ ದೇಶೀಯ ವ್ಯವಹಾರಗಳಿಂದ ಆದ ಒಟ್ಟು ಜಿಎಸ್‌ಟಿ ಸಂಗ್ರಹ ಒಟ್ಟು 1,41,945 ಕೋಟಿ ರೂ., ಆಮದುಗಳಿಂದ ಆದ ಸಂಗ್ರಹ ಕೇವಲ 41,702 ಕೋಟಿ ರೂ.
ಫೆಬ್ರುವರಿಯ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 14,117 ಕೋಟಿ ರೂ. ಸಂಗ್ರಹವಾಗಿದೆ.
ಮಹಾರಾಷ್ಟ್ರವು 30,637 ಕೋಟಿ ರೂ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದೆ.
ತೆಲಂಗಾಣ, ಗುಜರಾತ್, ಆಂಧ್ರಪ್ರದೇಶ ಮತ್ತು ಒಡಿಶಾದಂತಹ ಪ್ರಮುಖ ರಾಜ್ಯಗಳಿಂದ ಕಡಿಮೆ ಸಂಗ್ರಹ ವರದಿಯಾಗಿದೆ.
ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕದಂತಹ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಸುಧಾರಣೆಯಾಗಿದೆ.
Pixabay
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ