ರಸ್ತೆ ರಾಜನಂತೆ ಕಂಗೊಳಿಸುತ್ತಿದೆ
ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 440
By Umesh Kumar S Jan 25, 2025
Hindustan Times Kannada
ರಾಯಲ್ ಎನ್ ಫೀಲ್ಡ್ ಕಂಪನಿಯು ಸ್ಕ್ರಾಮ್ 440 ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ರ ಸುಧಾರಿತ ಆವೃತ್ತಿ ಈ ಸ್ಕ್ರಾಮ್ 440
ಸ್ಕ್ರಾಮ್ 440 ಬೈಕಿನಲ್ಲಿ 443 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.
ಈ ಎಂಜಿನ್ 25.4 ಬಿಹೆಚ್‌ಪಿ ಪವರ್ ಮತ್ತು 34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಇದು ಸುಗಮ ಹೆದ್ದಾರಿ ಪ್ರಯಾಣ, ಕಡಿಮೆ ಕಂಪನ ಮತ್ತು ಸುಧಾರಿತ ಇಂಧನ ದಕ್ಷತೆಯ ಭರವಸೆ ನೀಡುತ್ತದೆ.
ಇದರಲ್ಲಿ ಹೊಸ ಎಲ್ಇಡಿ ಹೆಡ್ ಲ್ಯಾಂಪ್, ಬದಲಾಯಿಸಬಹುದಾದ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಟ್ರಿಪ್ಪರ್ ನ್ಯಾವಿಗೇಷನ್ ಇದೆ
ಸ್ಕ್ರಾಮ್ 440 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಹೊಂದಿದ್ದು, ಕ್ರಮವಾಗಿ 190 ಎಂಎಂ ಮತ್ತು 180 ಎಂಎಂ ಟ್ರಾವೆಲ್ ಅನುಭವ ನೀಡುತ್ತದೆ
ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.
ಟ್ರೈಲ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 2.08 ಲಕ್ಷ ರೂ, ಫೋರ್ಸ್ ಮಾದರಿಯ ಬೆಲೆಯು 2.15 ಲಕ್ಷ ರೂಪಾಯಿ