ಉತ್ತಮ ಬಡ್ಡಿದರದಲ್ಲಿ ಪರ್ಸನಲ್‌ ಲೋನ್‌ ನೀಡುವ ಟಾಪ್‌ 7 ಬ್ಯಾಂಕ್‌ಗಳು

Pixabay

By Praveen Chandra B
Jan 03, 2025

Hindustan Times
Kannada

ವೈಯಕ್ತಿಕ ಸಾಲ ಪಡೆಯುವಾಗ ಬ್ಯಾಂಕ್‌ಗಳು ವಿಧಿಸುವ ಬಡ್ಡಿದರ ಹೋಲಿಕೆ ಮಾಡಿ ನೋಡುವುದು ಅತ್ಯಂತ ಅಗತ್ಯವಾಗಿದೆ. ಕಡಿಮೆ ಬಡ್ಡಿದರವಿದ್ದರೆ ಸಾಲ ಮರುಪಾವತಿ ಮಾಡುವ ಒಟ್ಟಾರೆ ವೆಚ್ಚ ಕಡಿಮೆಯಾಗುತ್ತದೆ.

Pixabay

ಎಚ್‌ಡಿಎಫ್‌ಸಿ ಬ್ಯಾಂಕ್‌: ಕ್ರೆಡಿಟ್ ಸ್ಕೋರ್ ಮತ್ತು ಕೆಲಸ ಮಾಡುವ ಕಂಪನಿಯಂತಹ ಅಂಶಗಳ ಆಧಾರದ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಬಡ್ಡಿದರ ಶೇ 10.85ರಿಂದ 24ವರೆಗೆ ಇರುತ್ತವೆ. ಸಂಸ್ಕರಣಾ ಶುಲ್ಕ 6,500 ರೂ ಮತ್ತು ಜಿಎಸ್ಟಿ ಇರುತ್ತದೆ.

Pinterest

ಐಸಿಐಸಿಐ ಬ್ಯಾಂಕ್‌: ಶೇ 10.85 ಮತ್ತು 16.25 ನಡುವೆ ಬಡ್ಡಿದರಗಳನ್ನು ವಿಧಿಸುತ್ತದೆ. ಸಾಲದ ಮೊತ್ತದ ಶೇಕಡ 2ವರೆಗೆ ಸಂಸ್ಕರಣಾ ಶುಲ್ಕವಿದೆ.

ಸಾಲಗಾರನ ಪ್ರೊಫೈಲ್ ಮತ್ತು ಕ್ರೆಡಿಟ್ ಅರ್ಹತೆಯನ್ನು ಅವಲಂಬಿಸಿ ಶೇಕಡ 11.40 ರಿಂದ ಶೇಕಡ 18.75ವರೆಗೆ ಬಡ್ಡಿದರ ಇರುತ್ತದೆ.

ಕೋಟಕ್‌ ಮಹೀಂದ್ರ ಬ್ಯಾಂಕ್‌: ಶೇಕಡ  10.99ರಿಂದ 16.99ವರೆಗೆ ಬಡ್ಡಿದರ  ಇರುತ್ತದೆ. ಸಾಲದ ಮೊತ್ತದ ಶೇಕಡ 5ವರೆಗೆ ಸಂಸ್ಕರಣಾ ಶುಲ್ಕವಿರುತ್ತದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ: ಶೇಕಡ 11.45 ಮತ್ತು 14.60 ನಡುವೆ ಬಡ್ಡಿಯನ್ನು ವಿಧಿಸುತ್ತದೆ.  ಜನವರಿ 31, 2025ರವರೆಗೆ ಶೂನ್ಯ ಸಂಸ್ಕರಣಾ ಶುಲ್ಕದಲ್ಲಿ ಸಾಲ ನೀಡುತ್ತದೆ.

Pinterest

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌: ಅರ್ಜಿದಾರರ ಪ್ರೊಫೈಲ್ ಅನ್ನು ಆಧರಿಸಿ ಶೇಕಡ  12.40ರಿಂದ  17.95ವರೆಗೆ ಬಡ್ಡಿದರದಲ್ಲಿ ಸಾಲ ನೀಡುತ್ತದೆ. 

ಆಕ್ಸಿಸ್‌ ಬ್ಯಾಂಕ್‌: ಶೇಕಡ 10.49 ಮತ್ತು ಶೇಕಡ 22.50 ನಡುವೆ ಬಡ್ಡಿದರ ಇದೆ.  ಸಂಸ್ಕರಣಾ ಶುಲ್ಕವು ಸಾಲದ ಮೊತ್ತದ ಶೇಕಡ 2 ವರೆಗೆ ಇರುತ್ತದೆ.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ