ಕಲಿಕೆ ಗಳಿಕೆ: ಕಾಲೇಜು ವಿದ್ಯಾರ್ಥಿಗಳಿಗೆ ಈ 7 ಆನ್‌ಲೈನ್ ಉದ್ಯೋಗ ಬೆಸ್ಟ್
Photo Credit: Unsplash
By Praveen Chandra B Dec 29, 2024
Hindustan Times Kannada
ಕಾಲೇಜು ವಿದ್ಯಾರ್ಥಿಗಳು ತಮ್ಮ ದೈನಂದಿನ ಖರ್ಚು ವೆಚ್ಚ ಸರಿದೂಗಿಸಲು ಕೆಲಸ ಮಾಡಲು ಬಯಸುತ್ತಾರೆ. ತಮ್ಮ ಅಧ್ಯಯನದ ಜತೆಗೆ ಯಾವುದಾದರೂ ಆನ್‌ಲೈನ್ ಉದ್ಯೋಗ ಮಾಡಲು ಬಯಸುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಏಳು ಆನ್‌ಲೈನ್ ಉದ್ಯೋಗ ಉತ್ತಮ ಎಂದು ಫೋರ್ಬ್ಸ್ ನಿಯತಕಾಲಿಕೆ ತಿಳಿಸಿದೆ.
Photo Credit: Unsplash
ಆಡಿಯೊ ಟ್ರಾನ್ಸ್ ಕ್ರೈಬರ್: ಆಡಿಯೋವನ್ನು ಪಠ್ಯವಾಗಿ ಪರಿವರ್ತಿಸುವ ಉದ್ಯೋಗ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ. ಎಷ್ಟು ನಿಮಿಷದ ಆಡಿಯೋವನ್ನು ಪಠ್ಯವಾಗಿ ಪರಿವರ್ತಿಸುವಿರೋ ಅಷ್ಟು ಹಣ ನಿಮಗೆ ದೊರಕುತ್ತದೆ.
Photo Credit: Unsplash
ಗ್ರಾಹಕ ಸೇವಾ ಪ್ರತಿನಿಧಿ: ಫೋನ್, ಇಮೇಲ್, ಪಠ್ಯ ಅಥವಾ ಲೈವ್ ಚಾಟ್ ಮೂಲಕ ಗ್ರಾಹಕರ ಸಮಸ್ಯೆಗಳಿಗೆ ಉತ್ತರಿಸುವುದು, ಪರಿಹಾರ ನೀಡುವ ಕೆಲಸವನ್ನು ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಮಾಡುತ್ತಾರೆ.
Photo Credit: Unsplash
ಡೇಟಾ ಎಂಟ್ರಿ ಅಸಿಸ್ಟೆಂಟ್: ಸ್ಲೈಡ್‌ಶೀಟ್‌ಗಳು, ಡೇಟಾಬೇಸ್‌ಗಳಲ್ಲಿ ಹೊಸ ಮಾಹಿತಿ ಸೇರಿಸುವುದು, ಇರುವ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಕೆಲಸ ಇದಾಗಿದೆ. ಈ ಉದ್ಯೋಗಕ್ಕೆ ಉತ್ತಮ ಟೈಪಿಂಗ್ ವೇಗ, ನಿಖರತೆ, ವಿವರಗಳಿಗೆ ಗಮನ ನೀಡುವ ಕೌಶಲ ಮತ್ತು ಡೇಟಾಬೇಸ್ ಸಾಫ್ಟ್‌ವೇರ್ ಜ್ಞಾನ ಇರಬೇಕಾಗುತ್ತದೆ.
Photo Credit: Unsplash
ಟೀಚರ್: ಕಾಲೇಜು ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಆನ್‌ಲೈನ್‌ನಲ್ಲಿ ಟ್ಯೂಷನ್ ನೀಡಬಹುದು. ಈಗ ವರ್ಚುವಲ್ ಕ್ಲಾಸ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ.
Photo Credit: Unsplash
ನೋಟ್ ಟೇಕರ್: ಉಪನ್ಯಾಸಗಳ ಟಿಪ್ಪಣಿ ತೆಗೆದುಕೊಳ್ಳುವ ಕೆಲಸ ಇದಾಗಿದೆ. ವೇಗ ಮತ್ತು ನಿಖರತೆ ಅಗತ್ಯವಾಗಿದೆ.
Photo Credit: Unsplash
ವಿಡಿಯೋ ಕ್ಯಾಪ್ಷನರ್: ವಿಡಿಯೋ ಪ್ರೋಗ್ರಾಂನ ಆಡಿಯೋ ಮತ್ತು ದೃಶ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಭಾಷಾಂತರ ಮಾಡುವ ಕೆಲಸ ಇದಾಗಿದೆ.
Photo Credit: Unsplash
ವರ್ಚುವಲ್ ಅಸಿಸ್ಟೆಂಟ್: ಆನ್‌ಲೈನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ವರ್ಚುವಲ್ ಅಸಿಸ್ಟೆಂಟ್ ಕೆಲಸವನ್ನು ಮಾಡಬಹುದು.
Photo Credit: Unsplash
ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?