ಗೂಗಲ್‌ ಉದ್ಯೋಗ ಸಂದರ್ಶನದ ಈ 8 ಸೀಕ್ರೇಟ್‌ ತಿಳಿದುಕೊಳ್ಳಿ

Photo Credit: Pexels

By Praveen Chandra B
Dec 24, 2024

Hindustan Times
Kannada

ಗೂಗಲ್‌ ಉದ್ಯೋಗ ಸಂದರ್ಶನದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಅಮೂಲ್ಯ ಸಲಹೆಗಳು ಇಲ್ಲಿವೆ.

Photo Credit: Pexels

 ಗೂಗಲ್‌ ನೇಮಕಾತಿ ವಿಭಾಗದ ಕಾರಾ ಅವರು ಗೂಗಲ್‌ ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಅಮೂಲ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ. 

Photo Credit: Flickr

ಗೂಗಲ್ ಸಂದರ್ಶನಗಳು ಹೆಚ್ಚಾಗಿ ಗೂಗಲ್ ಮೀಟ್‌ನಲ್ಲಿ ನಡೆಯುತ್ತವೆ. ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ನೀವು ಗೂಗಲ್‌ ಮೀಟ್‌ ಬಳಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. 

Photo Credit: Pexels

ಉದ್ಯೋಗ ಸಂದರ್ಶಕರ ಜತೆ ಮಾತನಾಡುವಾಗ ವೆಬ್‌ಕ್ಯಾಮ ನೋಡಿ. ಇದರಿಂದ ನೀವು ಸಂದರ್ಶಕರ ಜತೆ ಸಂಭಾಷಣೆಯಲ್ಲಿ ನಿರತವಾದಂತೆ ಕಾಣಿಸುತ್ತದೆ. 

Photo Credit: Pexels

ಸಂದರ್ಶನದಲ್ಲಿ ಹಾಜರಾಗುವಾಗ ಟಿಪ್ಪಣಿಗಳನ್ನು ಬಳಸಿ. ಮೊದಲೇ ಮಾಡಿಟ್ಟ ನೋಟ್ಸ್‌ಗಳಿಂದ ನಿಮಗೆ ಸಾಕಷ್ಟು ಅಂಶಗಳನ್ನು ಸಂದರ್ಶಕರ ಜತೆ ಮಾತನಾಡಲು ಸಾಧ್ಯವಾಗುತ್ತದೆ.

Photo Credit: Pexels

ಬೇರೆ ಮಾನಿಟರ್ ನೋಡಬೇಡಿ ಅಥವಾ ಕಂಪ್ಯೂಟರ್‌ನ ಇತರ ಟ್ಯಾಬ್‌ಗಳನ್ನೂ ನೋಡಬೇಡಿ. ವೆಬ್‌ಕ್ಯಾಮ್‌ ಕಡೆಗೆ ಗಮನವಿಟ್ಟು ಸಂಪೂರ್ಣವಾಗಿ ಸಂದರ್ಶನದಲ್ಲಿ ಮಗ್ನರಾಗಿ.

Photo Credit: Pexels

ಸಂದರ್ಶನದ ಸಮಯದಲ್ಲಿ ನೋಟ್ಸ್‌ ನೋಡಿಕೊಂಡು ನೇರವಾಗಿ ಓದಬೇಡಿ. ಸ್ವಾಭಾವಿಕವಾಗಿ ಮಾತನಾಡಿ. 

Photo Credit: Pexels

ನಿಮ್ಮಲ್ಲಿ  ಯಾವುದೇ ಸಂದೇಹಗಳಿದ್ದರೆ ಕೇಳಲು ಹಿಂಜರಿಯಬೇಡಿ

Photo Credit: Pexels

ಸಂದರ್ಶನಕ್ಕೆ ಮೊದಲು ನಿಮ್ಮ ಮಕ್ರೊಫೋನ್‌, ಕ್ಯಾಮೆರಾ ಮತ್ತು ಇಂಟರ್‌ನೆಟ್‌ ಸಂಪರ್ಕ ಸರಿಯಾಗಿರುವುದನ್ನು ಪರಿಶೀಲಿಸಿಕೊಳ್ಳಿ.

Photo Credit: Pexels

ನಿಮ್ಮ ಗೂಗಲ್ ಸಂದರ್ಶನದ ಸಮಯದಲ್ಲಿ ಆರಾಮದಾಯಕ ಬಟ್ಟೆಗಳನ್ನು ಧರಿಸಿ.

Photo Credit: Pexels

ಮಹಾ ಕುಂಭಮೇಳ ಸ್ನಾನದಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ

Pic Credit: Shutterstock