ಬಯಸಿದ ಕೆಲಸ ಸಿಗಬೇಕಂದ್ರೆ ನಿಮ್ಮ ರೆಸ್ಯೂಮ್‌ ಹೀಗಿರಲಿ

By Jayaraj
Aug 29, 2024

Hindustan Times
Kannada

ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ನಿಮ್ಮ ರೆಸ್ಯೂಮ್(CV) ಪರಿಶೀಲಿಸುವುದು ಸಾಮಾನ್ಯ. ಸಿವಿ ಆಧಾರದಲ್ಲಿ ನಮಗೆ ಜಾಬ್ ನೀಡಲಾಗುತ್ತದೆ.

ನೀವು ಯಾವ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತೀರೋ, ಅದಕ್ಕೆ ತಕ್ಕನಾಗಿ ರೆಸ್ಯೂಮ್‌ ಇರಲಿ. ಕಸ್ಟಮೈಸ್ ಮಾಡಿದ 2-3 ವಿಧದ ಸಿವಿ ಮಾಡಿಟ್ಟುಕೊಳ್ಳಿ.

ಜಾಬ್ ಪೋಸ್ಟ್‌ಗಳನ್ನು ಎಚ್ಚರಿಕೆಯಿಂದ ಓದಿ. ಅದರ ಪ್ರಮುಖ ಪಾಯಿಂಟ್ ಅಥವಾ ಕೀವರ್ಡ್‌ಗಳನ್ನು ಗುರುತಿಸಿ. ನಿಮ್ಮ ಪ್ರೊಫೈಲ್‌ ತೂಕ ಹೆಚ್ಚಿಸಲು ರೆಸ್ಯೂಮ್‌ನಲ್ಲಿ ಈ ಕೀವರ್ಡ್‌ಗಳನ್ನು ಸೇರಿಸಿ.

ಸರಳ ಮತ್ತು ಸ್ಪಷ್ಟವಾಗಿ ಕಾಣುವ ಫಾಂಟ್ ಆಯ್ಕೆಮಾಡಿ. Arial ಅಥವಾ Times New Roman ಉತ್ತಮ ಆಯ್ಕೆ. ಫಾಂಟ್‌ ಸೈಜ್‌ 10 ಮತ್ತು 12ರ ನಡುವೆ ಇರಲಿ.

ಅಪ್ರಸ್ತುತ ಪದಗಳ ಬಳಕೆ ತಪ್ಪಿಸಿ. ಅದರ ಬದಲಿಗೆ ನಿಮ್ಮ ಸಾಧನೆ, ನೀವು ಪೂರ್ಣಗೊಳಿಸಿದ ಮಹತ್ವದ ಟಾಸ್ಕ್‌ಗಳನ್ನು ನಮೂದಿಸಿ.

ಉದ್ದಕ್ಕೆ ವಾಕ್ಯಗಳನ್ನು ಬರೆಯುವುದು ಕಡಿಮೆ ಮಾಡಿ. ಚಿಕ್ಕದಾಗಿ ಮತ್ತು ಚೊಕ್ಕದಾಗಿ ಪಾಯಿಂಟ್‌ ಮಾಡಿ. ಬೇಗನೆ ಓದಲು ಸುಲಭವಾಗುವಂತಿರಲಿ.

ಅನುಭವ(Experience) ವಿಭಾಗದಲ್ಲಿ ನಿಮ್ಮ ಹಿಂದಿನ ಕೆಲಸವನ್ನು ವಿವರಿಸುವ ಬದಲು, ನೀವು ನಿರ್ವಹಿಸಿದ ಪಾತ್ರದ ಪ್ರಮುಖ 3 ಅಥವಾ 4 ಸಾಧನೆಗಳನ್ನು ಪಟ್ಟಿ ಮಾಡಿ.

ಅನುಭವ ಹೆಚ್ಚಿದ್ದರೆ, ಅವುಗಳನ್ನೇ ಹೈಲೈಟ್‌ ಮಾಡಿ. ಇಂಥಾ ಸಮಯದಲ್ಲಿ ಶೈಕ್ಷಣಿಕ ಸಾಧನೆಗಳನ್ನು ಆದಷ್ಟು ಸಂಕ್ಷಿಪ್ತಗೊಳಿಸಿ. ಅಥವಾ ಅದನ್ನು ಬಿಟ್ಟುಬಿಡಿ.

ರೆಸ್ಯೂಮ್‌ನಲ್ಲಿ ಸಿಂಗಲ್‌ ಸ್ಪೇಸಿಂಗ್‌ನೊಂದಿಗೆ 1 ಇಂಚು ಮಾರ್ಜಿನ್ ಬಳಸಿ. ಲೈನ್ ಸ್ಪೇಸಿಂಗ್ 1.15 ಅಥವಾ 1.5 ಇರಲಿ. ಮಾರ್ಜಿನ್‌ ಅನ್ನು 2 ಇಂಚುಗಳ ಒಳಗೆ ಇರಿಸಿ.

ರೆಸ್ಯೂಮ್‌ ಆದಷ್ಟು 1 ಪುಟಕ್ಕೆ ಸೀಮಿತವಾಗಿಸಿ. ಪ್ರತಿಯೊಂದು ಪದವನ್ನೂ ಅಳೆದು ತೂಗಿ ಬಳಸಿ. ಅನಗತ್ಯವಾಗಿ ದೀರ್ಘವಾಗಿ ಬರೆಯುವುದು ಬೇಡ.

ರೆಸ್ಯೂಮ್ ಸಲ್ಲಿಸುವ ಮೊದಲು ವ್ಯಾಕರಣ ತಪ್ಪುಗಳಿವೆಯೇ ನೋಡಿಕೊಳ್ಳಿ. ಬೇರೊಬ್ಬರಲ್ಲೂ ಪ್ರೂಫ್ ರೀಡ್ ಮಾಡಿಸಿ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna