ಬನಾರಸಿ ಟೊಮೆಟೊ ಚಾಟ್‌ ತಯಾರಿಸುವ ವಿಧಾನ

By Rakshitha Sowmya
Jan 27, 2025

Hindustan Times
Kannada

ಉತ್ತರ ಭಾರತದಲ್ಲಿ ಬನಾರಸಿ ಟೊಮೆಟೊ ಚಾಟ್‌ ಬಹಳ ಫೇಮಸ್‌, ಸಿಹಿ ಹಾಗೂ ಹುಳಿ ಮಿಶ್ರ ರುಚಿಯನ್ನು ಹೊಂದಿರುವ ಈ ಚಾಟನ್ನು ಮನೆಯಲ್ಲೇ ತಯಾರಿಸಬಹುದು

ಬನಾರಸಿ ಚಾಟ್‌ ತಯಾರಿಸಲು ಟೊಮೆಟೊ, ಬೇಯಿಸಿದ ಆಲೂಗಡ್ಡೆ, ಜೀರ್ಗೆ, ಇಂಗು, ಕೊತ್ತಂಬರಿ ಸೊಪ್ಪು, ಹುಣಿಸೆಚಟ್ನಿ, ಚಾಟ್‌ ಮಸಾಲಾ, ಉಪ್ಪು ಬೇಕು

ಟೊಮೆಟೊ, ಆಲೂಗಡ್ಡೆಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. ಜೊತೆಗೆ ಹುಣಿಸೆ ಚಟ್ನಿ ತಯಾರಿಸಿಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರ್ಗೆ, ಹಿಂಗು, ಟೊಮೆಟೊ, ಆಲೂಗಡ್ಡೆ ಹಾಕಿ ಫ್ರೈ ಮಾಡಿ

ಟೊಮೆಟೊ ಮೃದುವಾದಾಗ ಕೊತ್ತಂಬರಿ ಸೊಪ್ಪು, ಚಾಟ್‌ ಮಸಾಲಾ, ಉಪ್ಪು ಸೇರಿಸಿ ಮಿಕ್ಸ್‌ ಮಾಡಿ

ಇದರೊಂದಿಗೆ ಹುಣಿಸೆ ಚಟ್ನಿ ಸೇರಿಸಿ ಕೆಲವು ನಿಮಿಷ ಕುಕ್‌ ಮಾಡಿ

ಬಿಸಿ ಬಿಸಿ ಟೊಮೆಟೊ ಚಾಟನ್ನು ಸರ್ವಿಂಗ್‌ ಬೌಲ್‌ಗೆ ವರ್ಗಾಯಿಸಿ, ಮೇಲೆ ಹುರಿದ ಜೀರ್ಗೆ ಪುಡಿಯನ್ನು ಉದುರಿಸಿ

ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್‌ ಮಾಡಿದರೆ ಬನಾರಸಿ ಟೊಮೆಟೊ ಚಾಟ್‌ ರೆಡಿ 

ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ