ಈ 4 ವಿಚಾರಗಳಲ್ಲಿ ಮನುಷ್ಯ ಎಂದಿಗೂ ಸಂಕೋಚ ತೋರಬಾರದು ಎಂದು ಚಾಣಕ್ಯ ಹೇಳುತ್ತಾರೆ 

By Reshma
Jun 06, 2024

Hindustan Times
Kannada

ವಿದ್ವಾಂಸ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬೋಧಿಸಿರುವ ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ತುಂಬಾ ಸಂತೋಷದಿಂದ ಇರಬಹುದು.

ಚಾಣಕ್ಯರ ನೀತಿಯ ಅನುಕರಣೆಯಿಂದ ಸಂತೋಷದಿಂದ ಇರುವುದು ಮಾತ್ರವಲ್ಲ ಜನರು ನಿಮ್ಮನ್ನು ಗೌರವಿಸುತ್ತಾರೆ. ಇದರಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. 

ಚಾಣಕ್ಯರು ವ್ಯಕ್ತಿಯ ಜೀವನದಲ್ಲಿ ಮುಂದೆ ಸಾಗಲು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. 

ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವ್ಯಕ್ತಿಯು ಯಾವ ಜಾಗದಲ್ಲಿ ಸಂಕೋಚವನ್ನು ಬಿಡಬೇಕು ಎಂದು ಹೇಳಿದ್ದಾರೆ. 

ಒಬ್ಬ ವ್ಯಕ್ತಿಯು ಇಂತಹ ಕೆಲವು ಜಾಗಗಳಲ್ಲಿ ಸಂಕೋಚಪಡುತ್ತಿದ್ದರೆ ಅವನು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಹಾಗಾದರೆ ನಾವು ಯಾವ ಸ್ಥಳದಲ್ಲಿ ಸಂಕೋಚ ಬಿಡಬೇಕು ನೋಡಿ.

ನಿಮ್ಮ ಬಳಿ ಹಣವಿಲ್ಲದಿದ್ದರೆ ಅದನ್ನು ಗಳಿಸುವ ಸಲುವಾಗಿ ಯಾವುದೇ ಕೆಲಸ ಮಾಡಲು ನಾವು ಹಿಂಜರಿಕೆ ಮಾಡಬಾರದು. ಆದರೆ ನಾವು ಮಾಡುವ ಕೆಲಸ ನ್ಯಾಯಮಾರ್ಗದಲ್ಲಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. 

ಜ್ಞಾನ ಗಳಿಕೆಯ ಮೇಲೆ ನಿಮಗೆ ಒಲವಿದ್ದರೆ ಯಾವುದೇ ಸಂಕೋಚವಿಲ್ಲದೇ ಎಲ್ಲರಿಂದಲ್ಲೂ ಕಲಿಯುವ ಗುಣ ನಿಮ್ಮದಾಗಬೇಕು. 

ತಿನ್ನುವ ವಿಚಾರದಲ್ಲೂ ಮನುಷ್ಯನಿಗೆ ಸಂಕೋಚ ಇರಬಾರದು ಎಂದು ಚಾಣಕ್ಯ ಹೇಳುತ್ತಾರೆ. ನಾವು ತಿನ್ನುವಾಗ ಹೊಟ್ಟೆ ತುಂಬಾ ತಿನ್ನಬೇಕು. 

ಹಿರಿಯ ವ್ಯಕ್ತಿಗಳನ್ನು ಗೌರವಿಸುವುದರಲ್ಲಿ ಯಾವುದೇ ಸಂಕೋಚ ತೋರಬಾರದು ಎಂದು ಚಾಣಕ್ಯ ಹೇಳುತ್ತಾರೆ. 

ರಶ್ಮಿಕಾ ಮಂದಣ್ಣರ ಹೊಸ ಕ್ಯೂಟ್‌ ಫೋಟೋಗಳು ವೈರಲ್‌

AFP