ಬದುಕಿನ ಕುರಿತು ಚಾಣಕ್ಯರು ಹೇಳಿದ 8 ಕಟುಸತ್ಯಗಳಿವು 

By Reshma
Apr 26, 2024

Hindustan Times
Kannada

ನೀವು ಯಾವುದೇ ಕೆಲಸ ಆರಂಭಿಸುವ ಮುನ್ನ ನಿಮ್ಮಲ್ಲಿ ನೀವು ಈ 3 ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ನಾನು ಈ ಕೆಲಸ ಯಾಕೆ ಮಾಡುತ್ತಿದ್ದೇನೆ?, ಇದರ ಫಲಿತಾಂಶ ಏನಿರಬಹುದು, ನಾನು ಗೆಲುವು ಸಾಧಿಸಬಹುದೇ? ಈ ಪ್ರಶ್ನೆಗಳ ಬಗ್ಗೆ ದೀರ್ಘವಾಗಿ ಯೋಜಿಸಿ, ನಿಮ್ಮ ಮನಸ್ಸಿಗೆ ಖುಷಿ ಎನ್ನಿಸುವ ಉತ್ತರ ಸಿಕ್ಕರೆ ಮುಂದುವರಿಯಿರಿ ಎಂದು ಚಾಣಕ್ಯ ಹೇಳುತ್ತಾರೆ. 

ಚಾಣಕ್ಯರ ಪ್ರಕಾರ ಯಾವೊಬ್ಬ ಮನುಷ್ಯನಲ್ಲೂ ಅತಿ ವಿನಯ ಇರಬಾರದು. ನೇರವಾಗಿರುವ ಮರವನ್ನೇ ಜನರು ಹೆಚ್ಚು ಕಡಿಯಲು ಇಷ್ಟಪಡುತ್ತಾರೆ. ಇದು ಮನುಷ್ಯನಿಗೂ ಅನ್ವಯವಾಗುತ್ತದೆ. 

ಈ ಜಗತ್ತಿನ ಅತ್ಯಂತ ದೊಡ್ಡ ಶಕ್ತಿ ಎಂದರೆ ಯುವಕರು ಹಾಗೂ ಮಹಿಳೆಯರ ಸೌಂದರ್ಯ ಎಂದು ಚಾಣಕ್ಯ ಹೇಳುತ್ತಾರೆ. 

ನೀವು ಯಾವುದೇ ಕೆಲಸ ಮಾಡಲು ಹೊರಟಾಗ ಸೋಲಿಗೆ ಹೆದರಬೇಡಿ, ಅರ್ಧಕ್ಕೆ ಆ ಕೆಲಸವನ್ನು ನಿಲ್ಲಿಸಬೇಡಿ. ಕೆಲಸದಲ್ಲಿ ನೀವು ಪ್ರಾಮಾಣಿಕರಾಗಿದ್ದರೆ ಸಂತೋಷ ನಿಮ್ಮನ್ನು ಹುಡುಕಿ ಬರುತ್ತದೆ.

ಹೂವಿನ ಪರಿಮಳವು ಗಾಳಿ ಬೀಸಿದ ಕಡೆಯೆಲ್ಲಾ ಹರಡುತ್ತದೆ. ಆದರೆ ಮನುಷ್ಯ ಒಳ್ಳೆಯತನ ಎಲ್ಲಾ ಕಡೆ ಹರಡುತ್ತದೆ. 

ಜೀವನದ ಬಹುದೊಡ್ಡ ಗುರು ಮಂತ್ರ ಎಂದರೆ ನಿಮ್ಮ ರಹಸ್ಯಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದು ನಿಮ್ಮನ್ನು ನಾಶ ಮಾಡುತ್ತದೆ.

ಶಿಕ್ಷಣವು ನಮ್ಮ ನಿಜವಾದ ಸ್ನೇಹಿತ. ವಿದ್ಯಾವಂತರಿಗೆ ಎಲ್ಲಿ ಹೋದರು ಬೆಲೆ ಇದೆ. ಶಿಕ್ಷಣವು ಸೌಂದರ್ಯಯನ್ನೂ ಮೀರಿಸಿದ್ದು.

ಪ್ರತಿ ಸ್ನೇಹದ ಹಿಂದೆ ಹಾಗೂ ಸ್ನೇಹಿತರ ಹಿಂದೆ ಸ್ವಾರ್ಥ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಸ್ವಾರ್ಥವಿಲ್ಲದ ಸ್ನೇಹ ಪ್ರೇಮ ಎಂಬುದಿಲ್ಲ, ಇದು ಬದುಕಿನ ಕಟುಸತ್ಯ ಎಂದು ಚಾಣಕ್ಯ ಹೇಳಿದ್ದಾರೆ.   

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌