ಜೀವನದಲ್ಲಿ ಈ ಇಬ್ಬರು ವ್ಯಕ್ತಿಗಳ ಸಹವಾಸ ಎಂದಿಗೂ ಮಾಡದಿರಿ; ಚಾಣಕ್ಯರ ಸಲಹೆ 

By Reshma
Mar 06, 2024

Hindustan Times
Kannada

ಆಚಾರ್ಯ ಚಾಣಕ್ಯರು ಬದುಕಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ಈ ಎರಡು ಗುಣ ಇರುವ ವ್ಯಕ್ತಿಗಳನ್ನು ಎಂದಿಗೂ ನಂಬಬಾರದು. ಅವರು ನಮ್ಮನ್ನ ಮುಂದೆ ಹೋಗಲು ಬಿಡುವುದಿಲ್ಲ. 

ಇವರು ಸದಾ ನಮ್ಮ ಬದುಕಿಗೆ ಹಾನಿ ಮಾಡುತ್ತಾರೆ, ಅಲ್ಲದೇ ನಮ್ಮ ವೈಫಲ್ಯವನ್ನು ಕಾಯುತ್ತಿರುತ್ತಾರೆ.

ಆ ಕಾರಣಕ್ಕೆ ಈ ಎರಡು ಗುಣ ಇರುವ ವ್ಯಕ್ತಿಗಳಿಂದ ಸದಾ ದೂರ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. 

ಚಾಣಕ್ಯರ ಪ್ರಕಾರ ಎಂದಿಗೂ ಮೂರ್ಖರ ಸಹವಾಸ ಮಾಡಬಾರದು. 

ಮೂರ್ಖರು ಎಂದಿಗೂ ನಮ್ಮ ಸಮಯವನ್ನು ಹಾಳು ಮಾಡುತ್ತಾರೆ. ಅಲ್ಲದೇ ಅವರ ನಿರ್ಧಾರಗಳು ನಮಗೆ ಹಾನಿ ಉಂಟು ಮಾಡಬಹುದು. 

ಇನ್ನೊಬ್ಬ ವ್ಯಕ್ತಿ ಎಂದರೆ ಎಲ್ಲದರಲ್ಲೂ ತಪ್ಪು ಹುಡುಕುವವನು. ಅಂತಹವರ ಸಹವಾಸದಿಂದಲೂ ದೂರವಿರಬೇಕು. 

ಜನರು ಅವರಿಗೆ ಎಷ್ಟೇ ಒಳ್ಳೆಯದು ಮಾಡಿದರೂ ಅವರು ಪ್ರತಿಯೊಂದರಲ್ಲೂ ತಪ್ಪುಗಳನ್ನು ಹುಡುಕುತ್ತಾರೆ. 

ಇವರು ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವ ಮೂಡುವಂತೆ ಮಾಡುತ್ತಾರೆ. ನೀವು ಅವರ ಆಲೋಚನೆಗಳಿಗೆ ಬಲಿಪಶುವಾಗಬಹುದು. ಅಂತಹವರಿಂದ ದೂರವಿರುವುದು ಉತ್ತಮ.

ನೀವು ಅವರಂತೆಯೇ ಯೋಚಿಸಲು ಆರಂಭಿಸಿದಾಗ ನಿಮ್ಮ ಗುರಿಯಿಂದ ಹಿಂದೆ ಬೀಳುತ್ತೀರಿ. ಪ್ರಗತಿಯು ನಿಮ್ಮಿಂದ ದೂರ ಉಳಿಯುತ್ತದೆ. 

ಮಕ್ಕಳಿಗೆ ಚಿಕನ್ ತಿನ್ನಿಸುವ ಅಭ್ಯಾಸ ಇದ್ರೆ ಈ ವಿಚಾರ ತಿಳಿದಿರಲಿ

Image Source From unsplash