ಪುಟ್ಟ ಮಗುವಿನ ಬಟ್ಟೆಯಿಂದ ಎಣ್ಣೆ ವಾಸನೆ ಹೋಗಲಾಡಿಸಲು ಟಿಪ್ಸ್ 

By Reshma
May 25, 2025

Hindustan Times
Kannada

ಪುಟ್ಟ ಮಕ್ಕಳಿಗೆ ಮೂಳೆ, ದೇಹ ಬಲಪಡಿಸುವ ಸಲುವಾಗಿ ಎಣ್ಣೆ ಮಸಾಜ್ ಮಾಡುವುದು ಸಾಮಾನ್ಯ 

ಆದರೆ ಎಣ್ಣೆ ಮಸಾಜ್ ಮಾಡುವುದರಿಂದ ಮಗುವಿನ ಬಟ್ಟೆ ವಾಸನೆ ಬರಲು ಪ್ರಾರಂಭಿಸುತ್ತದೆ. ಚೆನ್ನಾಗಿ ಒಗೆದ ನಂತರವೂ ಎಣ್ಣೆ ವಾಸನೆ ಬರುತ್ತದೆ 

ಮಗುವಿನ ಬಟ್ಟೆಯಿಂದ ಎಣ್ಣೆ ವಾಸನೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್, ನೀವೂ ಟ್ರೈ ಮಾಡಿ 

ಮೊದಲು ನೀರು ಬಿಸಿ ಮಾಡಿ, ಇದಕ್ಕೆ ನಿಂಬೆ ರಸ ಮತ್ತು 1 ಚಮಚ ವಿನೇಗರ್ ಸೇರಿಸಿ 

ಈ ನೀರಿನಲ್ಲಿ ಬಟ್ಟೆಯನ್ನು 2 ಗಂಟೆಗಳ ಕಾಲ ನೆನೆಸಿಡಿ 

ಬಟ್ಟೆ ಚೆನ್ನಾಗಿ ನೆನೆದ ಬಳಿಕ ಸೋಪು ಅಥವಾ ಡಿಟರ್ಜೆಂಟ್ ಬಳಸಿ ಚೆನ್ನಾಗಿ ತೊಳೆಯಿರಿ 

ಮಗುವಿನ ಬಟ್ಟೆಗಳನ್ನು ಹೆಚ್ಚು ಉಜ್ಜಬೇಡಿ, ಹಾಳಾಗುವ ಸಾಧ್ಯತೆ ಇದೆ. ನಿಧಾನವಾಗಿ ತೊಳೆಯಿರಿ 

ನಂತರ ಅವುಗಳನ್ನು ಒಣಗಿಸಿ. ಮಗುವಿನ ಬಟ್ಟೆಯನ್ನು ತೀವ್ರ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಡಿ

ಬಟ್ಟೆಗಳನ್ನು ಸಂಪೂರ್ಣ ಒಣಗಿಸಿದ ನಂತರ ನಿಮ್ಮ ಕೈಗಳಿಗೆ ಬೇಬಿ ಪೌಡರ್ ಹಚ್ಚಿ. ಇದನ್ನು ಮಗುವಿನ ಬಟ್ಟೆಗಳಿಗೆ  ಹಚ್ಚಿ. ಇದರಿಂದ ಬಟ್ಟೆ ಸುವಾಸನೆ ಬರುತ್ತದೆ 

ಈ ರೀತಿ ಮಾಡುವುದರಿಂದ ಬಟ್ಟೆಯಿಂದ ಎಣ್ಣೆ ವಾಸನೆ ಸಂಪೂರ್ಣವಾಗಿ ಹೋಗುತ್ತದೆ, ಬಟ್ಟೆ ಚೆನ್ನಾಗಿರುತ್ತದೆ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS