ನಿಮ್ಮ ಮಗುವಿಗೆ ಕನ್ನಡಕ ಬಂದಿದ್ಯಾ? ಮಕ್ಕಳ ಕಣ್ಣಿನ ಆರೋಗ್ಯ ಸುಧಾರಿಸಲು ಇಲ್ಲಿದೆ 9 ಸಲಹೆ
Pinterest
By Reshma Jan 16, 2025
Hindustan Times Kannada
ಇತ್ತೀಚಿಗೆ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುತ್ತಿದೆ. ಹಾಗಾಗಿ ಸರಿಯಾದ ಆರೈಕೆಯತ್ತ ಗಮನ ಕೊಡುವುದು ಮುಖ್ಯವಾಗುತ್ತದೆ. ಮಗುವಿನ ಕಣ್ಣಿನ ಆರೋಗ್ಯ ಸುಧಾರಿಸಲು ತಜ್ಞರ ನೀಡಿದ ಸಲಹೆಗಳು ಇಲ್ಲಿವೆ.
Shutterstock
1. ನಿಯಮಿತ ಕನ್ನಡಕ ಬಳಕೆಯನ್ನು ಪ್ರೋತ್ಸಾಹಿಸಿ: ದೃಷ್ಟಿ ಸರಿಪಡಿಸಲು, ಒತ್ತಡ ಕಡಿಮೆ ಮಾಡಲು ಮತ್ತು ದೃಷ್ಟಿ ಹದಗೆಡುವುದನ್ನು ತಡೆಯಲು ಮಗುವಿಗೆ ನಿರಂತರವಾಗಿ ಕನ್ನಡಕ ಧರಿಸಲು ಹೇಳಿ
Shutterstock
2. ಸ್ಕ್ರೀನ್ ಟೈಮ್ ಮಿತಿಗೊಳಿಸಿ: ಕಣ್ಣಿನ ಒತ್ತಡ, ಮಯೋಪಿಯಾ ಮತ್ತು ಕಣ್ಣು ಒಣಗುವುದನ್ನು ತಪ್ಪಿಸಲು ಸ್ಕ್ರೀನ್ ಟೈಮ್ ಅನ್ನು ದಿನಕ್ಕೆ ಒಂದು ಗಂಟೆಗೆ ಮಿತಿಗೊಳಿಸಿ
Shutterstock
3. ಕಣ್ಣು ಉಜ್ಜುವುದನ್ನು ತಪ್ಪಿಸಿ: ಕಾರ್ನಿಯಾಗೆ ಹಾನಿಯಾಗದಂತೆ ತಡೆಯಲು ಮತ್ತು ಕೆರಾಟೊಕೊನಸ್ ಸಮಸ್ಯೆ ತಪ್ಪಿಸಲು ಕಣ್ಣುಗಳನ್ನು ಉಜ್ಜದಂತೆ ಮಕ್ಕಳಿಗೆ ಕಲಿಸಿ
Shutterstock
4. ಆರೋಗ್ಯಕರ ಆಹಾರ ನೀಡಿ: ವಿಟಮಿನ್ ಎ, ಸಿ ಮತ್ತು ಒಮೆಗಾ -3 ಗಳಿಂದ ಸಮೃದ್ಧವಾಗಿರುವ ಪೌಷ್ಟಿಕ ಆಹಾರ ನೀಡಿ. ಕ್ಯಾರೆಟ್, ಪಾಲಕ್ ಮತ್ತು ಮೀನಿನಂತಹ ಆಹಾರಗಳು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತವೆ
Shutterstock
5. ಹೊರಾಂಗಣ ಆಟವನ್ನು ಪ್ರೋತ್ಸಾಹಿಸಿ: ಹೊರಗೆ ಸಮಯ ಕಳೆಯುವುದು ಮಯೋಪಿಯಾದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಬಲಪಡಿಸುತ್ತದೆ
Shutterstock
6. ಅಂತರವಿರಲಿ: ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮಗುವಿನ ದೃಷ್ಟಿಯನ್ನು ಸುಧಾರಿಸಲು ಪುಸ್ತಕ ಸೇರಿದಂತೆ ಓದುವ ವಸ್ತುಗಳನ್ನು ಕನಿಷ್ಠ 40 ಸೆಂ.ಮೀ ದೂರದಲ್ಲಿ ಇರಿಸಿ
Shutterstock
7. ಸರಿಯಾದ ಬೆಳಕನ್ನು ಖಚಿತಪಡಿಸಿಕೊಳ್ಳಿ: ಕಣ್ಣುಗಳಿಗೆ ತೊಂದರೆಯಾಗದಂತೆ ಓದುವ ಜಾಗದಲ್ಲಿ ಬೆಳಕು ಚೆನ್ನಾಗಿರಬೇಕು. ಇದರಿಂದ ಕಣ್ಣಿನ ಆಯಾಸವೂ ಕಡಿಮೆಯಾಗುತ್ತದೆ
Shutterstock
8. ಸಾಕಷ್ಟು ನಿದ್ರೆ ಅವಶ್ಯ: 7-8 ಗಂಟೆಗಳ ನಿದ್ರೆಯು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಯಾಸ ಮತ್ತು ಅಸ್ವಸ್ಥತೆಯನ್ನು ತಡೆಯುತ್ತದೆ
Shutterstock
9. ನಿಯಮಿತ ಕಣ್ಣಿನ ತಪಾಸಣೆ: ಸಂಭಾವ್ಯ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಲು ಮತ್ತು ಮಗುವಿನ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಪ್ರತಿ ಆರು ತಿಂಗಳಿಗೊಮ್ಮೆ ನೇತ್ರ ತಜ್ಞರನ್ನು ಭೇಟಿ ಮಾಡಿ