ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಐದು ಆಹಾರಗಳು ಸಹಕಾರಿ

freepik

By Priyanka Gowda
Nov 30, 2024

Hindustan Times
Kannada

ಚಳಿಗಾಲದಲ್ಲಿ ಮಕ್ಕಳು ಶೀತ, ಜ್ವರಕ್ಕೆ ಒಳಗಾಗುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಐದು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು.

freepik

ಮಕ್ಕಳು ಗಂಟಲು ನೋವು, ಶೀತ, ಜ್ವರ ಇತ್ಯಾದಿಗಳಿಂದ ಬಳಲುವುದು ಸಾಮಾನ್ಯ. ಹೀಗಾಗಿ ಮಕ್ಕಳಿಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ನೀಡುವುದು ಮುಖ್ಯ.

freepik

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸುವುದು ಬಹಳ ಮುಖ್ಯ. ಹೀಗಾಗಿ ಈ ಆಹಾರಗಳನ್ನು ಸೇವಿಸಬೇಕು.

freepik

ಕ್ಯಾರೆಟ್‍: ಇದರಲ್ಲಿ ಬೀಟಾ ಕ್ಯಾರೋಟಿನ್, ವಿಟಮಿನ್ ಎ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಈ ತರಕಾರಿಯನ್ನು ಸೇವಿಸುವುದರಿಂದ ವೈರಸ್‍ನಿಂದ ರಕ್ಷಣೆ ಪಡೆಯಬಹುದು.

freepik

ಸಿಹಿ ಗೆಣಸು: ಇದರಲ್ಲಿ ಬೀಟಾ ಕ್ಯಾರೋಟಿನ್, ವಿಟಮಿಸ್ ಸಿ ಅನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

freepik

ಸಜ್ಜೆ: ಇದು ಶಕ್ತಿ ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

freepik

ಖರ್ಜೂರ: ವಿಟಮಿನ್‌ಗಳು, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಮೆಗ್ನೇಸಿಯಂ ಇರುವುದರಿಂದ ಖರ್ಜೂರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

freepik

ಒಣಹಣ್ಣುಗಳು ಮತ್ತು ಬೀಜಗಳಲ್ಲಿ ಪ್ರೋಟೀನ್, ಕೊಬ್ಬಿನಾಮ್ಲಗಳು, ಫೈಬರ್‌ಗಳು, ಖನಿಜಗಳು ಮತ್ತು ವಿಟಮಿನ್‍ಗಳಿಂದ ಸಮೃದ್ಧವಾಗಿದೆ.

freepik

ಚಳಿಗಾಲದಲ್ಲಿ ಬೆಳ್ಳುಳ್ಳಿ ತಿನ್ನಿ, ಈ ಪ್ರಯೋಜನಗಳನ್ನು ಪಡೆಯಿರಿ

Pexel