ಬಿಯರ್ ಕೋಲ್ಡ್ ಆದಷ್ಟೂ ರುಚಿ ಜಾಸ್ತಿ ಯಾಕೆ?

By Raghavendra M Y
Jun 15, 2024

Hindustan Times
Kannada

ಭಾರತ ಸೇರಿದಂತೆ ಹಲವು ಅನೇಕ ಪ್ರದೇಶಗಳಲ್ಲಿ ಬಿಸಿಯ ವಾತಾವರಣ ಇದೆ. ಈ ಸೀಸನ್‌ನಲ್ಲಿ ಮದ್ಯ ಪ್ರಿಯರು ಕೋಲ್ಡ್ ಬಿಯರ್ ಇಷ್ಟ ಪಡುತ್ತಾರೆ

ಸಾಮಾನ್ಯ ಬಿಯರ್‌ಗಿಂತ ಕೋಲ್ಡ್ ಬಿಯರ್ ರುಚಿ ಹೆಚ್ಚು. ಈ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು ಇದನ್ನ ಒಪ್ಪಿಕೊಂಡಿದ್ದಾರೆ

ಮ್ಯಾಟರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಕೋಲ್ಡ್ ಬಿಯರ್‌ನ ರುಚಿ ಸಾಮಾನ್ಯ ಬಿಯರ್‌ಗಿಂತ ಉತ್ತಮವಾಗಿರುತ್ತೆ ಎಂದು ಹೇಳಲಾಗಿದೆ

ನೀರಿನ ವರ್ತನೆ ಮತ್ತು ಆಲ್ಕೋಹಾಲ್ಯುಕ್ತ ಪಾನೀಯಗಳಲ್ಲಿ ಇರುವ ಎಥೆನಾಲ್ ಅಣುಗಳನ್ನು ಅಧ್ಯಯನ ಮಾಡುವ ಮೂಲಕ ಕೋಲ್ಡ್ ಬಿಯರ್ ರುಚಿ ಜಾಸ್ತಿ ಅನ್ನೋದನ್ನ ಕಂಡು ಹಿಡಿದಿದ್ದಾರೆ

ಸಂಶೋಧನೆಯಲ್ಲಿ ವಿಜ್ಞಾನಿಗಳು ಎಥೆನಾಲ್ ಅಣುಗಳ ರುಚಿಯು ನೀರಿನ ತಾಪಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ

ಕಡಿಮೆ ತಾಪಮಾನವು ಬಿಯರ್ ವಿಶೇಷ ಗುಣಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಎಂದು ಕೋಲ್ಡ್ ಬಿಯರ್ ಸಂಶೋಧನೆಯಲ್ಲಿ ತೊಡಗಿರುವ ಪ್ರೊಫೆಸರ್ ಲಿ ಜಿನ್ಯಾಂಗ್ ಹೇಳಿದ್ದಾರೆ

ಬಿಯರ್‌ನಲ್ಲಿರುವ ನೀರು, ಎಥೆನಾಲ್ ಅಣುಗಳನ್ನು ಅಧ್ಯಯನ ಮಾಡುವಾಗ ವಿಜ್ಞಾನಿಗಳು ಎಥೆನಾಲ್ ಅಣುಗಳು ವಿಭಿನ್ನ ಪಾನೀಯಗಳಲ್ಲಿ ವಿಭಿನ್ನ ತಾಪಮಾನದಲ್ಲಿ ನಿರ್ದಿಷ್ಟ ಆಕಾರಗಳನ್ನು ಪಡೆಯುತ್ತವೆ ಎಂದು ಹೇಳಿದ್ದಾರೆ

ಬಿಯರ್‌ನಂತಹ ಆಲ್ಕೊಹಾಲ್‌ನಂತಹ ಪಾಮೀನಯಗಳನ್ನು ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿದರೆ ಎಥೆನಾಲ್ ಅಣುಗಳು ಪಿರಮಿಡ್‌ಗಳ ರೂಪವನ್ನು ಪಡೆಯುತ್ತವೆ

ಲಘು ಬಿಯರ್‌ನಲ್ಲಿ ಶೇಕಡಾ 4 ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಆದರೆ ಸಾಮಾನ್ಯ ಮತ್ತು ಕ್ರಾಫ್ಟ್ ಬಿಯರ್ ಪರಿಮಾಣದ ಪ್ರಕಾರ 5 ರಿಂದ 10 ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ

ಹವಾಮಾನ ಬದಲಾವಣೆ ಬಿಯರ್‌ ಮೇಲೆ ಪರಿಣಾಮ ಬೀರಿದೆ. ಕೋಲ್ಡ್ ಬಿಯರ್ ಮದ್ಯ ಪ್ರಿಯರು ಫಿದಾ ಆಗಿದ್ದಾರೆ

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ