ಡಿಸೆಂಬರ್ 25ರಂದೇ ಕ್ರಿಸ್‌ಮಸ್ ಆಚರಿಸುವುದೇಕೆ?
By Reshma
Dec 24, 2024
Hindustan Times
Kannada
ಕ್ರಿಸ್‌ಮಸ್ ಕ್ರಿಶ್ಚಿಯನ್ನರ ಪ್ರಮುಖ ಹಬ್ಬ. ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಆಚರಿಸಲಾಗುತ್ತದೆ
ಹಾಗಾದರೆ ಪ್ರತಿವರ್ಷ ಡಿಸೆಂಬರ್ 25ರಂದೇ ಕ್ರಿಸ್‌ಮಸ್ ಆಚರಿಸುವುದೇಕೆ, ಇದರ ಹಿಂದಿನ ಕಾರಣಗಳೇನು?
ಕ್ರಿಸ್‌ಮಸ್ ಇತಿಹಾಸದ ಬಗ್ಗೆ ಇತಿಹಾಸಕಾರರಲ್ಲೇ ಹಲವು ಭಿನ್ನಾಭಿಪ್ರಾಯಗಳಿವೆ
ಕೆಲವು ಇತಿಹಾಸಕಾರರ ಪ್ರಕಾರ ಕ್ರಿಸ್‌ಮಸ್ ರೋಮನ್ ಹಬ್ಬವಾದ ಸ್ಯಾಟರ್ನಾಲಿಯದ ಹೊಸ ರೂಪ. ಇದನ್ನು ಏಸುಕ್ರಿಸ್ತನ ಜನನಕ್ಕೂ ಮೊದಲು ಆಚರಿಸಲಾಗುತ್ತಿತ್ತು
ಕ್ರಿಶ್ಚಿಯಾನಿಟಿಯನ್ನು ಸ್ಥಾಪಿಸಿದಾಗ ಜನರು ಜೀಸಸ್ ಅನ್ನು ತಮ್ಮ ದೇವರೆಂದು ಪರಿಗಣಿಸಿ ಸ್ಯಾಟರ್ನಾಲಿಯನ್ನು ಕ್ರಿಸ್‌ಮಸ್ ಎಂದು ಆಚರಿಸಲು ಪ್ರಾರಂಭಿಸಿದರು
ಕೆಲವು ಇತಿಹಾಸಕಾರರ ಪ್ರಕಾರ ಕ್ರಿಸ್‌ಮಸ್ ಅನ್ನು ಮೊದಲು 336ರಲ್ಲಿ ಮೊದಲ ರೋಮನ್ ಚಕ್ರವರ್ತಿಯ ಆಳ್ವಿಕೆಯಲ್ಲಿ ಆಚರಿಸಲಾಯಿತು
ನಂತರ ಕ್ರಿಸ್ತಪೂರ್ವ 350ರಲ್ಲಿ ರೋಮನ್ ಪಾದ್ರಿ ಜೂಲಿಯಸ್ ಡಿಸೆಂಬರ್ 25 ಅನ್ನು ಕ್ರಿಸ್‌ಮಸ್ ದಿನವೆಂದು ಘೋಷಿಸಿದರು
ಕ್ರೈಸ್ತರು ಯೇಸುಕ್ರಿಸ್ತನನ್ನು ತಮ್ಮ ದೇವರು ಎಂದು ನಂಬುತ್ತಾರೆ
ಜೀಸಸ್ ಕ್ರೈಸ್ಟ್ ಡಿಸೆಂಬರ್ 25 ರಂದು ಜನಿಸಿದರು ಎಂದು ಕೆಲವರು ನಂಬುತ್ತಾರೆ. ಆದ್ದರಿಂದ ಈ ದಿನವನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ
ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ