ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿಯೂ ತಮ್ಮ ಎಂದಿನ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇಂತಿಪ್ಪ ಹನುಮಂತನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ತರಹೇವಾರಿ ವದಂತಿಗಳು ಓಡಾಡುತ್ತಲೇ ಇರುತ್ತಿವೆ.
ಅದರಲ್ಲೂ ರಿಯಾಲಿಟಿ ಶೋಗಳ ಸರದಾರನಾಗಿರುವ ಹನುಮಂತು, ಅವರ ಆಸ್ತಿ ಎಷ್ಟಿರಬಹುದು ಎಂಬ ಚರ್ಚೆಗಳು ನಡೆಯುತ್ತಲಿರುತ್ತವೆ.
ಹನುಮಂತ ಮೊದಲಿನಂತಿಲ್ಲ, ಅವನೇನಿದ್ರೂ ಈಗ ಕೋಟಿ ಕುಳ ಎಂಬೆಲ್ಲ ಸುಳ್ಳು ಸುದ್ದಿ ಹಬ್ಬಿಸಿದವರಿದ್ದಾರೆ.
ಆದರೆ, ಅದ್ಯಾವುದುಕ್ಕೂ ಕಿವಿಗೊಡದ ಹನುಮಂತ, ತಾನಾಯ್ತು ತನ್ನ ಕುಟುಂಬವಾಯ್ತು, ಕೆಲಸವಾಯ್ತು ಎಂದಷ್ಟೇ ಇರುತ್ತಾರೆ.
ಇತ್ತೀಚೆಗಷ್ಟೇ ಹನುಮಂತು ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಾಗ, ಮಾರುತಿ ಸ್ವಿಫ್ಟ್ ಕಾರಿನ ಇಎಂಐ ಕಟ್ಟಲು ಆಗಲಿಲ್ಲ ಎಂದಿದ್ದಾರೆ.
ಡೌನ್ ಪೇಮೆಂಟ್ ಮಾಡಿ 8.5 ಲಕ್ಷ ರೂ ಮೌಲ್ಯದ ಕಾರ್ ಖರೀದಿಸಿದ್ದಾರೆ ಹನುಮಂತು. ಪ್ರತಿ ತಿಂಗಳು ಅದರ ಕಂತು ತುಂಬುತ್ತಿದ್ದಾರೆ. ರಿಯಾಲಿಟಿ ಶೋದಿಂದ ಬಂದ ಹಣದಿಂದಲೇ ಸ್ವಂತ ಮನೆ ಕಟ್ಟಿಸಿದ್ದಾರೆ. ಅದನ್ನು ಬಿಟ್ಟು 40 ಕುರಿಗಳನ್ನು ಹೊಂದಿದ್ದಾರೆ.
ಇದನ್ನು ಬಿಟ್ಟರೆ ಬೇರೆ ಆದಾಯ ಹನುಮಂತನಿಗಿಲ್ಲ ಎಂದು ಅವರ ಸಹೋದರ ಯೂಟ್ಯೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.