ಮಜಾ ಟಾಕೀಸ್‌ನಿಂದ ಮಿಸ್ ಆದವರು ಒಬ್ಬಿಬ್ಬರಲ್ಲ! ಯಾರೆಲ್ಲ ಇರಲ್ಲ ಹೊಸ ಸೀಸನ್‌ನಲ್ಲಿ?
By Manjunath B Kotagunasi
Jan 18, 2025
Hindustan Times
Kannada
ಈಗಾಗಲೇ ಹೊಸ ಪ್ರೋಮೋ ಮೂಲಕವೇ ಮಜಾ ಟಾಕೀಸ್ ಗಮನ ಸೆಳೆಯುತ್ತಿದೆ. ಹತ್ತಾರು ಹೊಸಬರ ಆಗಮನವಾಗುತ್ತಿದೆ.
ಗಿಚ್ಚಿ ಗಿಲಿಗಿಲಿ ತಂಡದ ಒಂದಷ್ಟು ಕಲಾವಿದರು ಈ ಸಲದ ಮಜಾ ಟಾಕೀಸ್‌ನ ಹೈಲೈಟ್. ಯೋಗರಾಜ್ ಭಟ್ ವಿಶೇಷ ಆಕರ್ಷಣೆ.
ಸಂಗೀತ ನಿರ್ದೇಶಕ ವಿ ಮನೋಹರ್ ಈ ಹೊಸ ಸೀಸನ್‌ನ ಪ್ರೋಮೋದಲ್ಲಿ ಕಂಡಿಲ್ಲ.
ಸೃಜ ಜತೆಗೆ ರಾಣಿಯಾಗಿ ಕಾಮಿಡಿ ಕಚಗುಳಿ ಇಡುತ್ತಿದ್ದ ಶ್ವೇತಾ ಚೆಂಗಪ್ಪ ಸದ್ಯ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿದ್ದಾರೆ.
ಶೋನ ದೃಷ್ಟಿಬೊಟ್ಟು ಎಂದೇ ಸೃಜನ್ ಕರೆಯುತ್ತಿದ್ದ ಇಂದ್ರಜಿತ್ ಲಂಕೇಶ್ ಈ ಸಲದ ಹೊಸ ಮಜಾ ಟಾಕೀಸ್ ಶೋನಲ್ಲಿ ಇಲ್ಲ. ಪ್ರೋಮೋದಲ್ಲಿಯೂ ಕಂಡಿಲ್ಲ.
ಈ ವರೆಗಿನ ಎಲ್ಲ ಮಜಾ ಟಾಕೀಸ್‌ನ ಸೀಸನ್‌ಗಳಲ್ಲಿ ನಗಿಸುವ ಕಾಯಕದ ಜವಾಬ್ದಾರಿ ಹೊತ್ತಿದ್ದ ಮಂಡ್ಯ ರಮೇಶ್, ಹೊಸ ಸೀಸನ್‌ನಲ್ಲಿ ಭಾಗವಹಿಸುತ್ತಿಲ್ಲ.
ಹಿಂದಿನ ಸೀಸನ್‌ಗಳಲ್ಲಿ ಕಾಮಿಡಿ ಪಂಚ್ ನೀಡುತ್ತ, ನಕ್ಕು ನಗಿಸುತ್ತಿದ್ದ ಪವನ್, ಹೊಸ ಮಜಾ ಟಾಕೀಸ್ ಸೀಸನ್‌ನಿಂದ ಮಿಸ್ ಆಗಿದ್ದಾರೆ.
ಒನ್ ಅಂಡ್ ಓನ್ಲಿ ವರಲಕ್ಷ್ಮೀಯಾಗಿ ಗಮನ ಸೆಳೆದಿದ್ದ ಅಪರ್ಣಾ ವಸ್ತಾರೆ, ಕಳೆದ ವರ್ಷ ನಿಧನರಾದರು. ಅವರ ಅನುಪಸ್ಥಿತಿ ಈ ಸಲದ ಶೋನಲ್ಲಿ ಎದ್ದು ಕಾಣಲಿದೆ.
ಹಿಂದಿನ ಸೀಸನ್‌ನಲ್ಲಿ ಮಜ ಮಜವಾದ ಹಾಡುಗಳನ್ನು ಹಾಡುತ್ತ, ಕಾಮಿಡಿಗೂ ಸೈ ಎನಿಸಿಕೊಂಡಿದ್ದ ಗಾಯಕಿ ರೆಮೋ ಸಹ ಈ ಸೀಸನ್‌ನಲ್ಲಿ ಭಾಗವಹಿಸುತ್ತಿಲ್ಲ.
ಮದುಮಗಳಂತೆ ಸಿಂಗಾರಗೊಂಡ ನಿರೂಪಕಿ ಚೈತ್ರಾ ವಾಸುದೇವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ