ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್‌ಸ್ಟಾಗ್ರಾಂನಲ್ಲಿ ಕಂಡ ಕೊನೆಯ ಸ್ಟೇಟಸ್‌ಗಳಿವು
By Umesh Kumar S May 12, 2025
Hindustan Times Kannada
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇಂದು (ಮೇ 12) ನಸುಕಿನ 3.30ರ ವೇಳೆಗೆ ಏಕಾಕಿ ಕುಸಿದುಬಿದ್ದು ಮೃತಪಟ್ಟರು,. ಲೋಬಿಪಿ, ಪಲ್ಸ್ ರೇಟ್ ಕುಸಿದು ಹೀಗಾಗಿದೆ ಎಂದು ಆರಂಭಿಕ ಮಾಹಿತಿ ಲಭ್ಯವಾಗಿದ್ದವು. ಈಗ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಗಮನಸೆಳೆದಿದೆ.
ರಾಕೇಶ್ ಪೂಜಾರಿ ಅವರಿಗೆ 34 ವರ್ಷ ವಯಸ್ಸು. ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೆತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು.
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ. ಸಾವಿಗೂ ಮೊದಲು ಅವರು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಅಪ್ಡೇಟ್ ಮಾಡಿದ ನಾಲ್ಕು ವಿಷಯಗಳಿವು
ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದ ರಾಕೇಶ್ ಪೂಜಾರಿ.
ಸಂಭ್ರಮ ಕೂಟದಲ್ಲಿ ಸ್ನೇಹಿತರೊಂದಿಗಿನ ಫೋಚೋ ಹಂಚಿಕೊಂಡಿದ್ದ ಕಾಮಿಡಿ ಸ್ಟಾರ್
ಉಡುಪಿಯ ಕಾರ್ಕಳ ಸಮೀಪ ಮದುವೆಯೊಂದರಲ್ಲಿ ನಿನ್ನೆ ಭಾಗವಹಿಸಿದ್ದ ರಾಕೇಶ್ ಪೂಜಾರಿ
ಸೋದರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ರಾಕೇಶ್ ಪೂಜಾರಿ
ಲೈಫ್ ಈಸ್ ಶಾರ್ಟ್ ಮಿ 2 ಎಂಬ ಇನ್‌ಸ್ಟಾಗ್ರಾಂ ಖಾತೆಯ ಕೋಟ್ ಈಗ ಗಮನಸೆಳೆದಿದೆ.
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಅವರ ನವಿರು ಹಾಸ್ಯ ಅಮರ.