ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಪತ್ನಿ ಇವರೇ ನೋಡಿ
By Jayaraj
Dec 03, 2024
Hindustan Times
Kannada
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹಿರಿಮೆ ಜಯ್ ಶಾ ಅವರದ್ದು. ಏಕೆಂದರೆ ಭಾರತೀಯನಿಗೆ ಈಗ 36 ವರ್ಷ. ಜಯ್ ಶಾ ಐಸಿಸಿಯ 16ನೇ ಅಧ್ಯಕ್ಷರಾಗಿದ್ದಾರೆ.
ವಿಶೇಷವೆಂದರೆ ಜಯ್ ಶಾಗಿಂತ ಮುಂಚಿನ ಐಸಿಸಿ ಅಧ್ಯಕ್ಷರೆಲ್ಲರೂ 55 ವರ್ಷಕ್ಕಿಂತ ಮೇಲ್ಪಟ್ಟವರು.
ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಿಗೆ ಈಗಾಗಲೇ ವಿವಾಹವಾಗಿದ್ದು, ಜಯ್ ಶಾ ಪತ್ನಿಯ ಹೆಸರು ರಿಷಿತಾ ಪಟೇಲ್.
ಜಯ್ ಶಾ ಮತ್ತು ರಿಷಿತಾ ಪಟೇಲ್ 2015ರಲ್ಲಿ ಮದುವೆಯಾದರು. ರಿಷಿತಾ ಅವರು ಕಾಲೇಜು ಜೀವನದಿಂದಲೂ ಜಯ್ ಶಾ ಗೆಳತಿ.
ರಿಷಿತಾ ಪಟೇಲ್ ಅಹಮದಾಬಾದ್ ಕೈಗಾರಿಕೋದ್ಯಮಿ ಗುಣವಂತಶೈ ಅವರ ಪುತ್ರಿ.
ಕಳೆದ ತಿಂಗಳಷ್ಟೇ ರಿಷಿತಾ ಮೂರನೇ ಮಗುವಿನ ತಾಯಿಯಾದರು. ಮಗನಿಗೆ ಜನ್ಮ ನೀಡುವ ಮುನ್ನ, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಜಯ್ ಶಾ ತಮ್ಮ ವೈಯಕ್ತಿಕ ಜೀವನದ ಕುರಿತ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ರಿಷಿತಾ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿಲ್ಲ. ಶಾ ಅವರು ತಮ್ಮ ಇನ್‌ಸ್ಟಾದಲ್ಲಿ ಪತ್ನಿ ಜತೆಗಿನ ಕೆಲವೇ ಚಿತ್ರಗಳನ್ನು ಮಾತ್ರ ಹಂಚಿಕೊಂಡಿದ್ದಾರೆ.
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ