ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದಕ್ಕೆ ಕ್ರಿಕೆಟ್ ಕ್ಷೇತ್ರವೂ ಹೊರತಾಗಿಲ್ಲ. ಬಾಲಿವುಡ್ ನಟಿಯರೊಂದಿಗೆ ಡಿವೋರ್ಸ್ ಪಡೆದವರ ಸಂಖ್ಯೆಯೇ ಹೆಚ್ಚು.
ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ವಿಚ್ಛೇದನ ಪಡೆದ ಬೆನ್ನಲ್ಲೇ ಯುಜ್ವೇಂದ್ರ ಚಹಲ್ ಮತ್ತು ಮನೀಶ್ ಪಾಂಡೆ ತಮ್ಮ ಪತ್ನಿಯರಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ಗೂ ಕ್ರಿಕೆಟ್ಗೂ ಅವಿನಾಭಾವ ಸಂಬಂಧ ಇದೆ. ಕ್ರಿಕೆಟಿಗರು ಮತ್ತು ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಕೆಲವರು ಚೆನ್ನಾಗಿಯೇ ಸಂಸಾರ ಮಾಡುತ್ತಿದ್ದರೆ, ಕೆಲವರು ವಿವಿಧ ಕಾರಣಗಳಿಂದ ವಿಚ್ಛೇದನ ಪಡೆದಿದ್ದಾರೆ.
ಭಾರತೀಯ ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾಗಿ ವಿಚ್ಛೇದನ ನೀಡಿರುವ ಐವರು ನಟಿಯರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ರೀನಾ ರಾಯ್ 1980 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಆದರೆ, ಕೆಲವು ವರ್ಷಗಳ ನಂತರ ಈ ದಂಪತಿ ವಿಚ್ಛೇದನ ಪಡೆದರು.
indianewengland
ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ 14 ವರ್ಷಗಳ ದಾಂಪತ್ಯದ ನಂತರ 2010ರಲ್ಲಿ ಬೇರ್ಪಟ್ಟರು.
ಮೊಹಮ್ಮದ್ ಶಮಿ 2014ರಲ್ಲಿ ಮಾಡೆಲ್ ಮತ್ತು ನಟಿ ಹಸಿನ್ ಜಹಾನ್ ಅವರನ್ನು ವಿವಾಹವಾದರು. ಆದರೆ 2018ರಲ್ಲಿ ಬೇರ್ಪಟ್ಟರು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020ರಲ್ಲಿ ವಿವಾಹವಾದರು. 2024ರ ಜುಲೈನಲ್ಲಿ ವಿಚ್ಛೇದನ ಪಡೆದರು.
ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಬಗ್ಗೆಯೂ ಇದೇ ರೀತಿಯ ವದಂತಿಗಳಿವೆ. 2020ರಲ್ಲಿ ಧನಶ್ರೀ ಮತ್ತು ಚಹಲ್ ವಿವಾಹವಾದರು.