ಒಂದೇ ಇನ್ನಿಂಗ್ಸ್‌ನಲ್ಲಿ 13 ಸಿಕ್ಸ್; ಅಭಿಷೇಕ್ ಶರ್ಮಾ ದಾಖಲೆ
By Jayaraj
Feb 02, 2025
Hindustan Times
Kannada
ಇಂಗ್ಲೆಂಡ್ ವಿರುದ್ಧದ ಸರಣಿಯ 5ನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ.
ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರ, 54 ಎಸೆತಗಳಲ್ಲಿ 135 ರನ್ ಸಿಡಿಸಿ ಔಟಾದರು.
ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 13 ಸ್ಫೋಟಕ ಸಿಕ್ಸರ್‌ಗಳು ಸೇರಿದ್ದವು.
ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಭಾರತ ಪರ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ. ಒಂದೇ ಇನ್ನಿಂಗ್ಸ್‌ನಲ್ಲಿ ಇಷ್ಟು ಸಿಕ್ಸರ್ ಭಾರತದ ಬೇರೆ ಯಾವ ಆಟಗಾರನೂ ಗಳಿಸಿಸಿಲ್ಲ.
ಭಾರತದ ಪರ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ತಲಾ 10 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್, 37 ಎಸೆತಗಳಲ್ಲಿ ಶತಕ ಬಾರಿಸಿದರು.
ಅಭಿಷೇಕ್ ಗಳಿಸಿದ 135 ರನ್, ಈ ಸ್ವರೂಪದಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಈ ಹಿಂದೆ ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ 126 ರನ್ ಗಳಿಸಿದ್ದು ಈವರೆಗಿನ ಗರಿಷ್ಠ ಮೊತತವಾಗಿತ್ತು.
Photos: ANI
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ