ಕೆಎಲ್ ರಾಹುಲ್ ಮನವಿ ತಿರಸ್ಕರಿಸಿದ ಅಜಿತ್ ಅಗರ್ಕರ್
By Jayaraj
Jan 11, 2025
Hindustan Times
Kannada
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ಕೋರಿ ಕೆಎಲ್ ರಾಹುಲ್ ಸಲ್ಲಿಸಿದ್ದ ಮನವಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ತಿರಸ್ಕರಿಸಿದೆ.
ವಿರಾಮ ಕೋರಿದ್ದ ರಾಹುಲ್
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಯಾರಿಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳನ್ನು ಆಡುವಂತೆ ಆದೇಶಿಸಲಾಗಿದೆ.
ಜನವರಿ 22ರಿಂದ ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಇಂಗ್ಲೆಂಡ್ ಸರಣಿ
ಅದರ ಬೆನ್ನಲ್ಲೇ ಫೆಬ್ರುವರಿ 06ರಿಂದ ಏಕದಿನ ಸರಣಿ ನಡೆಯಲಿದೆ. ಸಂಪೂರ್ಣ ವೈಟ್ ಬಾಲ್ ಸರಣಿಯಿಂದ ಕನ್ನಡಿಗ ರಾಹುಲ್ ವಿರಾಮ ಕೋರಿದ್ದರು.
ಇದೀಗ ಕೆಎಲ್ ರಾಹುಲ್ ಅವರ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.
ಆಯ್ಕೆ ಸಮಿತಿಯು ಆರಂಭದಲ್ಲಿ ರಾಹುಲ್ ಮನವಿಯನ್ನು ಒಪ್ಪಿಕೊಂಡಿತ್ತು. ಆದರೆ ಮಾಧ್ಯಮ ವರದಿ ಪ್ರಕಾರ ಮತ್ತೆ ನಿರಾಕರಿಸಿದೆ.
ಚಾಂಪಿಯನ್ಸ್ ಟ್ರೋಫಿಗೆ ಕೆಎಲ್ ರಾಹುಲ್ ಅವರ ಆಯ್ಕೆಗೆ ಬಿಸಿಸಿಐ ಬಯಸಿದೆ. ಹೀಗಾಗಿ ಆಂಗ್ಲರ ವಿರುದ್ಧದ ಸರಣಿಗೂ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.
ಈ ಸರಣಿ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಆಡುವ ಬಳಗದ ಸಂಯೋಜನೆಯನ್ನು ಅಂತಿಮಗೊಳಿಸಲು ಅವಕಾಶವಿದೆ.
Photo: Instagram and Agencies File
ಈ ರಾಡಿಕ್ಸ್ ಸಂಖ್ಯೆಯವರು ಗಣೇಶನಿಗೆ ಬಹಳ ಪ್ರಿಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ