ಚಾಂಪಿಯನ್ಸ್ ಟ್ರೋಫಿ: ಕರುಣ್ ನಾಯರ್ ಕಡೆಗಣನೆಗೆ ಕಾರಣ ತಿಳಿಸಿದ ಅಗರ್ಕರ್
By Jayaraj
Jan 18, 2025
Hindustan Times
Kannada
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕನಾದರೆ, ಶುಭ್ಮನ್ ಗಿಲ್‌ಗೆ ಉಪನಾಯಕನ ಪಟ್ಟ ನೀಡಲಾಗಿದೆ.
AFP
ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ತಂಡ ಘೋಷಿಸಿದ್ದಾರೆ.
AFP
ಈ ಬಾರಿ ಏಕದಿನ ಸರಣಿಗೆ ಕನ್ನಡಿಗ ಕರುಣ್ ನಾಯರ್ ಅವರನ್ನು ಅಯ್ಕೆ ಮಾಡುವ ನಿರೀಕ್ಷೆ ಇತ್ತು.
ಆದರೆ, ತಂಡಕ್ಕೆ ಎಲ್ಲರನ್ನೂ ಆಯ್ಕೆ ಮಾಡುವುದು ಕಷ್ಟ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಪ್ರದರ್ಶನವನ್ನು ಶ್ಲಾಘಿಸಿದ ಅಗರ್ಕರ್, ತಂಡಕ್ಕೆ ಎಲ್ಲರನ್ನೂ ಆಯ್ಕೆ ಮಾಡಲು ಕಷ್ಟಸಾಧ್ಯ ಎಂದಿದ್ದಾರೆ.
"ತಂಡಕ್ಕೆ ಬೇಕಾದ ಸಂಯೋಜನೆಯಂತೆ ಪ್ರತಿಯೊಬ್ಬರನ್ನೂ ಹೊಂದಿಸುವುದು ಕಷ್ಟ" ಎಂದು ಅವರು ಹೇಳಿದ್ದಾರೆ.
"750ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಅಚ್ಚರಿ. ಆದರೆ ಇದು ಕೇವಲ 15 ಜನರ ತಂಡ. ಎಲ್ಲರಿಗೂ ಸ್ಥಾನ ಕೊಡಲು ಸಾಧ್ಯವಿಲ್ಲ" ಎಂದು ಅಗರ್ಕರ್ ಹೇಳುತ್ತಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ 7 ಇನ್ನಿಂಗ್ಸ್‌ಗಳಲ್ಲಿ 752 ರನ್ ಗಳಿಸಿದ್ದಾರೆ.
ಕರುಣ್ ನಾಯರ್ ಸ್ಕೋರ್ ಹೀಗಿದೆ: 112*, 44*, 163*, 111*, 112(101), 122* ಮತ್ತು 88*. ಟೂರ್ನಿಯಲ್ಲಿ ಒಮ್ಮೆ ಮಾತ್ರ ಔಟಾಗಿದ್ದು, 5 ಶತಕ ಬಾರಿಸಿದ್ದಾರೆ.
Photos: Instagram
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ