ಸತತ ಅವಕಾಶಗಳ ನಡುವೆಯೂ ಐಪಿಎಲ್ ಬೇಡ ಎಂದುಕೊಂಡ ಇಂಗ್ಲೆಂಡ್ ಕ್ರಿಕೆಟಿಗ ಅಲೆಕ್ಸ್ ಹೇಲ್ಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಸಿಲ್ಹೆಟ್ ಸ್ಟ್ರೈಕರ್ಸ್ ವಿರುದ್ಧ ರಂಗ್ಪುರ್ ರೈಡರ್ಸ್ ಪರ ಹೇಲ್ಸ್ ಶತಕ ಸಿಡಿಸಿ ದಾಖಲೆ ಬರೆದರು.
ಅಲೆಕ್ಸ್ ಹೇಲ್ಸ್ 56 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್ ಸಹಿತ 201.79ರ ಸ್ಟ್ರೈಕ್ರೇಟ್ನಲ್ಲಿ 113 ರನ್ ಸಿಡಿಸಿ ತಂಡಕ್ಕೆ ಗೆಲವು ತಂದುಕೊಟ್ಟರು.
ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 13 ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್ನ ಮೊದಲ, ವಿಶ್ವದ 4ನೇ ಬ್ಯಾಟರ್.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದ್ದು, 455 ಇನ್ನಿಂಗ್ಸ್ಗಳಲ್ಲಿ 14562 ರನ್ ಗಳಿಸಿದ್ದಾರೆ.
ಪಾಕಿಸ್ತಾನದ ಶೋಯೆಬ್ ಮಲಿಕ್ 2ನೇ ಸ್ಥಾನದಲ್ಲಿದ್ದು, 510 ಟಿ20 ಇನ್ನಿಂಗ್ಸ್ಗಳಲ್ಲಿ 13492 ರನ್ ಸಿಡಿಸಿದ್ದಾರೆ.
ವೆಸ್ಟ್ ಇಂಡೀಸ್ನ ಕಿರನ್ ಪೊಲಾರ್ಡ್ 3ನೇ ಸ್ಥಾನ ಪಡೆದಿದ್ದು 611 ಟಿ20 ಇನಿಂಗ್ಸ್ಗಳಲ್ಲಿ ಒಟ್ಟು 13355 ರನ್ ಬಾರಿಸಿದ್ದಾರೆ.
ಪ್ರಸ್ತುತ ಅಲೆಕ್ಸ್ ಹೇಲ್ಸ್ 4ನೇ ಸ್ಥಾನದಲ್ಲಿದ್ದು, 475 ಇನ್ನಿಂಗ್ಸ್ಗಳಲ್ಲಿ 13160 ರನ್ ಕಲೆ ಹಾಕಿದ್ದಾರೆ.
ಭಾರತದ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. 382 ಇನ್ನಿಂಗ್ಸ್ಗಳಲ್ಲಿ 12886 ರನ್ ಸಿಡಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ಭಾರತದ ಮೊದಲ ಆಟಗಾರನೂ ಹೌದು.
Photo: X and Hindustan times
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ