ಅತಿ ಹೆಚ್ಚು ವಿಕೆಟ್; ಚಹಲ್ ದಾಖಲೆ ಹಿಂದಿಕ್ಕಿದ ಅರ್ಷದೀಪ್

By Prasanna Kumar P N
Jan 22, 2025

Hindustan Times
Kannada

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ ಅರ್ಷದೀಪ್, ಲೆಗ್​ಸ್ಪಿನ್ನರ್ ಯುಜ್ವೇಂದ್ರ ಚಹಲ್ ದಾಖಲೆ ಮುರಿದಿದ್ದಾರೆ.

ಟಿ20ಐ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಪಾತ್ರರಾಗಿದ್ದಾರೆ. 

ಸದ್ಯ ಅರ್ಷದೀಪ್ ಖಾತೆಯಲ್ಲಿ 97 ವಿಕೆಟ್‌ಗಳಿವೆ. 25ರ ಹರೆಯದ ವೇಗಿ 61 ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಯುಜ್ವೇಂದ್ರ ಚಹಲ್ 80 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. ಇದೀಗ ಚಹಲ್ ಅವರನ್ನು ಅರ್ಷದೀಪ್ ಹಿಂದಿಕ್ಕಿದ್ದಾರೆ.

ಅರ್ಷದೀಪ್ ಜುಲೈ 2022ರಲ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಅಲ್ಪಾವಧಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಅರ್ಷದೀಪ್, ಚಹಲ್ ಮೊದಲ ಎರಡು ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ 91 ವಿಕೆಟ್ ಕಿತ್ತು 3ನೇ ಸ್ಥಾನದಲ್ಲಿದ್ದಾರೆ. 

ವೇಗಿ ಜಸ್ಪ್ರೀತ್ ಬುಮ್ರಾ 89 ವಿಕೆಟ್ ಉರುಳಿಸಿ 4ನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ಸಹ ಅಷ್ಟೇ ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.

All Photos: AFP

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ