ನಂಬರ್‌ 1 ಬೌಲರ್‌ ಆಗಲು ಅರ್ಷದೀಪ್‌ಗೆ ಬೇಕು 2 ವಿಕೆಟ್‌

By Jayaraj
Jan 21, 2025

Hindustan Times
Kannada

ಭಾರತದ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌, ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20ಯಲ್ಲಿ ದಾಖಲೆ ನಿರ್ಮಿಸುವ ಅವಕಾಶವಿದೆ.

ನಾಳೆ (ಜ.22) ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯವು ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವೇಗಿ ರೆಕಾರ್ಡ್‌ ಮಾಡುವ ನಿರೀಕ್ಷೆ ಇದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ ಇತಿಹಾಸ ನಿರ್ಮಾಣವಾಗಲಿದೆ.

ಅರ್ಷದೀಪ್ ಸಿಂಗ್ ಈವರೆಗೆ 60 ಟಿ20 ಪಂದ್ಯಗಳಲ್ಲಿ ಆಡಿ 95 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಆ ಮೂಲಕ ಟಿ20 ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. 

ಯುಜುವೇಂದ್ರ ಚಹಲ್ ಟಿ20 ಕ್ರಿಕಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. 80 ಪಂದ್ಯಗಳಲ್ಲಿ ಅವರು 96 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಇದೀಗ ಚಹಲ್‌ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲು ಅರ್ಷದೀಪ್‌ಗೆ ಅವಕಾಶವಿದೆ.

ಇಂಗ್ಲೆಂಡ್‌ ವಿರುದ್ಧ 2 ವಿಕೆಟ್‌ ಪಡೆದರೆ, ಅರ್ಷದೀಪ್‌ ವಿಕೆಟ್‌ ಗಳಿಕೆ ಸಂಖ್ಯೆ 97ಕ್ಕೇರಲಿದೆ. ಅವರು ಈ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಎನಿಸಿಕೊಳ್ಳಲಿದ್ದಾರೆ.

All Photos: AFP

ಕಾಲುಗಳು ಏಕೆ ಊದಿಕೊಳ್ಳುತ್ತವೆ? ಇಲ್ಲಿದೆ ಕಾರಣ