ಎಲ್‌ಎಸ್‌ಜಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್‌ನಿಂದ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಅಶುತೋಷ್ ಶರ್ಮಾ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು.
ಅಶುತೋಷ್ ಅಜೇಯ 66 ರನ್ ಗಳಿಸುವ ಮೂಲಕ ಡೆಲ್ಲಿ ತಂಡವನ್ನು ಗುರಿ ತಲುಪಿಸಿದರು.
31 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 66 ರನ್ ಸಿಡಿಸಿದರು.
ಒಂದು ವಿಕೆಟ್ ಮಾತ್ರ ಉಳಿದಿದ್ದಾಗ ಅಶುತೋಷ್ ಅವರ ವೀರೋಚಿತ ಪ್ರದರ್ಶನವು ಗಮನ ಸೆಳೆಯಿತು. ಐಪಿಎಲ್‌ನ ಉತ್ತಮ ಇನ್ನಿಂಗ್ಸ್‌ಗಳಲ್ಲಿ ಇದು ಕೂಡಾ ಒಂದಾಗಿದೆ.
ಐಪಿಎಲ್‌ನಲ್ಲಿ ಯಶಸ್ವಿ ಚೇಸ್‌ನಲ್ಲಿ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ 65 ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಶುತೋಷ್ ಪಾತ್ರರಾಗಿದ್ದಾರೆ.
ಈ ಹಿಂದೆ ಯೂಸುಫ್ ಪಠಾಣ್ 2009ರಲ್ಲಿ ಡಿಸಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ 62 ರನ್ ಗಳಿಸಿದ್ದರು. ಅದನ್ನು ಅಶುತೋಷ್ ಹಿಂದಿಕ್ಕಿದ್ದಾರೆ.
ಕೆಳ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಡ್ವೇನ್ ಬ್ರಾವೋ ಹೆಸರಲ್ಲಿದೆ. 2018ರಲ್ಲಿ ಎಂಐ ವಿರುದ್ಧ ಸಿಎಸ್‌ಕೆ ಪರ 68 ರನ್ ಗಳಿಸಿದ್ದರು.