ಮಿಚೆಲ್ ಸ್ಟಾರ್ಕ್ 700 ವಿಕೆಟ್; ಆಸ್ಟ್ರೇಲಿಯಾ ವಿಶ್ವದಾಖಲೆ
By Prasanna Kumar P N Jan 31, 2025
Hindustan Times Kannada
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗಿ ಮಿಚೆಲ್ ಸ್ಟಾರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ಗಳ ಸಾಧನೆ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ವಿಶ್ವದಾಖಲೆಗೆ ಪಾತ್ರವಾಯಿತು.
ಪಂದ್ಯದ ಎರಡನೇ ದಿನದಂದು ಶ್ರೀಲಂಕಾದ ದಿಮುತ್ ಕರುಣರತ್ನೆ ಅವರನ್ನು 7 ರನ್ಗೆ ಔಟ್ ಮಾಡಿದ ಮಿಚೆಲ್ ಸ್ಟಾರ್ಕ್ 700 ವಿಕೆಟ್ಗಳ ಕ್ಲಬ್ಗೆ ಸೇರ್ಪಡೆಗೊಂಡರು.
700 ವಿಕೆಟ್ಗಳ ಸೇರ್ಪಡೆಯಾದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ನಾಲ್ಕು ಬೌಲರ್‌ಗಳನ್ನು ಹೊಂದಿರುವ ವಿಶ್ವದ ಮೊದಲ ತಂಡವಾಗಿದೆ.
ಆಸ್ಟ್ರೇಲಿಯಾ ಪರ ಶೇನ್ ವಾರ್ನ್ (1001 ವಿಕೆಟ್), ಗ್ಲೆನ್ ಮೆಕ್‌ಗ್ರಾತ್ (949 ವಿಕೆಟ್), (ಬ್ರೆಟ್ ಲೀ 718 ವಿಕೆಟ್), ಮಿಚೆಲ್ ಸ್ಟಾರ್ಕ್ (700 ವಿಕೆಟ್) 700+ ವಿಕೆಟ್ ಪಡೆದಿದ್ದಾರೆ.
700 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೂವರು ಬೌಲರ್‌ಗಳನ್ನು ಹೊಂದಿರುವ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಅವರೆಂದರೆ ಅನಿಲ್ ಕುಂಬ್ಳೆ (956), ರವಿಚಂದ್ರನ್ ಅಶ್ವಿನ್ (765) ಮತ್ತು ಹರ್ಭಜನ್ ಸಿಂಗ್ (711).
ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ 7 ವಿಕೆಟ್ ನಷ್ಟಕ್ಕೆ 647 ರನ್ ಸಿಡಿಸಿ ಡಿಕ್ಲೇರ್ ಘೋಷಿಸಿತು.
ಉಸ್ಮಾನ್ ಖವಾಜ 232 ರನ್, ಸ್ಟೀವ್ ಸ್ಮಿತ್ 141 ರನ್, ಜೋಶ್ ಇಂಗ್ಲಿಸ್ 102 ರನ್ ಸಿಡಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 2ನೇ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿದೆ. ಇನ್ನೂ 610 ರನ್ಗಳ ಹಿನ್ನಡೆಯಲ್ಲಿದೆ.
ಮಕ್ಕಳಿಗೆ ಚಿಕನ್ ತಿನ್ನಿಸುವ ಅಭ್ಯಾಸ ಇದ್ರೆ ಈ ವಿಚಾರ ತಿಳಿದಿರಲಿ