ವಿಶ್ವಕಪ್ ಗೆದ್ದ ಭಾರತ ವನಿತೆಯರಿಗೆ ಬಿಸಿಸಿಐನಿಂದ ಭರ್ಜರಿ ನಗದು ಬಹುಮಾನ 

By Jayaraj
Feb 03, 2025

Hindustan Times
Kannada

ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ನಿಕಿ ಪ್ರಸಾದ್ ನೇತೃತ್ವದ ತಂಡವು, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದು ಬೀಗಿತು.

ಹೀಗಾಗಿ ವಿಶ್ವಕಪ್‌ ವಿಜೇತ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ 5 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.

ಟೂರ್ನಿಯಲ್ಲಿ 309 ರನ್ ಗಳಿಸಿದ ಗೊಂಗಾಡಿ ತ್ರಿಶಾ, ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಪಿನ್ನರ್‌ ವೈಷ್ಣವಿ ಶರ್ಮಾ 17 ವಿಕೆಟ್‌ ಪಡೆದರೆ, ಆಯುಷಿ ಶುಕ್ಲಾ 14 ವಿಕೆಟ್ ಕಬಳಿಸಿದರು.

2023ರಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ಗೆಲುವು ಸಾಧಿಸಿತ್ತು.‌

ಇದೀಗ 2025ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಇದರೊಂದಿಗೆ ಭವಿಷ್ಯದ ಭಾರತ ವನಿತೆಯರ ತಂಡ ತುಂಬಾ ಬಲಿಷ್ಠವಾಗುವ ಸುಳಿವು ಸಿಕ್ಕಿದೆ.

Photos: BCCI

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು