ಐಪಿಎಲ್ನಿಂದ ಹ್ಯಾರಿ ಬ್ರೂಕ್ಗೆ ಎರಡು ವರ್ಷ ನಿಷೇಧ
By Prasanna Kumar PN
Mar 13, 2025
Hindustan Times
Kannada
ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ 18ನೇ ಐಪಿಎಲ್ನಿಂದ ಹಿಂದೆ ಸರಿದಿದ್ದ ಹ್ಯಾರಿ ಬ್ರೂಕ್ಗೆ ಬಿಸಿಸಿಐ ಶಿಕ್ಷೆ ವಿಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿದ್ದ ಇಂಗ್ಲೆಂಡ್ ಕ್ರಿಕೆಟಿಗ ಬ್ರೂಕ್, ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದರು.
ಹ್ಯಾರಿ ಬ್ರೂಕ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ 2 ವರ್ಷಗಳ ನಿಷೇಧ ಹೇರಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿ ರೂಗೆ ಖರೀದಿಸಿತ್ತು. ಕಳೆದ ಬಾರಿಯೂ ಅವರು ಹಿಂದೆ ಸರಿದಿದ್ದರು.
ಟೂರ್ನಿ ಆರಂಭಕ್ಕೂ ಮುನ್ನ ಬಿಸಿಸಿಐ ಐಪಿಎಲ್ ನಿಯಮಗಳಿಗೆ ಪರಿಷ್ಕರಣೆ ತಂದಿತ್ತು.
ನಿಯಮಾವಳಿಯ ಪ್ರಕಾರ ನೋಂದಾಯಿತ ಆಟಗಾರನೊಬ್ಬ ಗಾಯ ಅಥವಾ ಅನಿವಾರ್ಯ ಕಾರಣಗಳಿಗೆ ಐಪಿಎಲ್ನಿಂದ ಹಿಂದೆ ಸರಿದರೆ ಅದಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.
ಆದರೆ, ಸುಖಾಸುಮ್ಮನೆ ಅನ್ಯ ಕಾರಣಗಳನ್ನು ನೀಡಿದರೆ 2 ವರ್ಷಗಳ ನಿಷೇಧ ಹೇರಬಹುದು.
18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22ರಿಂದ ಆರಂಭವಾಗಲಿದೆ. ಆರ್ಸಿಬಿ vs ಕೆಕೆಆರ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ