ಸಂಜು ಸ್ಯಾಮ್ಸನ್ ವಿರುದ್ಧ ಬಿಸಿಸಿಐ ಅಸಮಾಧಾನ
By Prasanna Kumar P N
Jan 18, 2025
Hindustan Times
Kannada
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ವಿರುದ್ಧ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ.
ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸುವುದಕ್ಕೂ ಮುನ್ನ ಬಿಸಿಸಿಐ ಆಟಗಾರರ ಪ್ರದರ್ಶನ ಪರಿಶೀಲನೆ ನಡೆಸಿತು.
ಈ ವೇಳೆ ಸಂಜು ಸ್ಯಾಮ್ಸನ್ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಗರಂ ಆಗಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಆಡದಿರುವುದೇ ಇದಕ್ಕೆ ಕಾರಣ.
ಕೆಲವು ತಿಂಗಳಿಂದಲೂ ಟೀಮ್ ಇಂಡಿಯಾ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕು ಎಂಬ ನಿಯಮ ವಿಧಿಸಿದೆ.
ನಿಯಮ ಉಲ್ಲಂಘಿಸಿದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈಬಿಟ್ಟು ಬಿಸಿಸಿಐ ಶಿಕ್ಷೆ ನೀಡಿದೆ.
ಆದರೂ ಸಂಜು ಸ್ಯಾಮ್ಸನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಆಡಲು ಹಿಂದೆ ಸರಿದಿದ್ದರು.
ಈ ಟೂರ್ನಿಗೂ ಮುನ್ನ ತರಬೇತಿ ಶಿಬಿರಕ್ಕೆ ಹಾಜರಾಗುವಂತೆ ಕೇರಳ ಕ್ರಿಕೆಟ್ ಸಂಸ್ಥೆ ಸೂಚನೆ ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದರು ಎಂದು ವರದಿಯಾಗಿತ್ತು.
ಶಿಬಿರ ಮುಗಿದ ಬೆನ್ನಲ್ಲೇ ಸಂಜುರನ್ನು ಕೇರಳ ಕ್ರಿಕೆಟ್ ಸಂಸ್ಥೆ ಕೈ ಬಿಟ್ಟಿತ್ತು. ಕೆಸಿಎ-ಸ್ಯಾಮ್ಸನ್ ನಡುವೆ ಬಿರುಕು ಉಂಟಾಗಿತ್ತು ಎಂಬ ವರದಿಯಾಗಿತ್ತು.
ಆದರೆ ವಿಜಯ್ ಹಜಾರೆ ಟ್ರೋಫಿಯಿಂದ ಹಿಂದೆ ಸರಿಯಲು ಆಯ್ಕೆದಾರರಿಗೆ ಯಾವುದೇ ಕಾರಣ ನೀಡಿರಲಿಲ್ಲ. ಇದು ಕೋಪಕ್ಕೆ ಕಾರಣವಾಗಿದೆ.
ಟ್ರೆಂಡ್‌ನಲ್ಲಿರುವ ವಜ್ರದ ಮಂಗಳಸೂತ್ರ ಡಿಸೈನ್‌ಗಳಿವು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ