ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷ: ಕ್ರೀಡಾಂಗಣ ವಿಶೇಷಗಳು
By Jayaraj
Nov 22, 2024
Hindustan Times
Kannada
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವದ ಸುಸಜ್ಜಿತ ಕ್ರೀಡಾಂಗಣಗಳಲ್ಲಿ ಒಂದು. ಭಾರತದಲ್ಲಿ ಈ ಮೈದಾನಕ್ಕಿಂತ ಉತ್ತಮ ಮೈದಾನ ಬೇರೊಂದಿಲ್ಲ.
ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಆರಂಭವಾಗಿ ಇಂದಿಗೆ (ನವೆಂಬರ್ 22) 50 ವರ್ಷಗಳು ಪೂರೈಸಿವೆ.
1974ರ ನವೆಂಬರ್ 22ರಂದು ಇಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಭಾರತ vs ವೆಸ್ಟ್ ಇಂಡೀಸ್ ಆಡಿದ್ದವು.
1970ರಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭವಾಯ್ತು, 1974ರಲ್ಲಿ ಅರ್ಧ ಕೆಲಸ ಪೂರ್ಣವಾಯ್ತು.
ಬಿಸಿಸಿಐ ಅಧ್ಯಕ್ಷರಾಗಿದ್ದ ಎಂ ಚಿನ್ನಸ್ವಾಮಿ ಅವರ ನೆನಪಿಗಾಗಿ ಈ ಸ್ಟೇಡಿಯಂಗೆ ಅವರ ಹೆಸರಿಡಲಾಗಿದೆ.
ಸಬ್-ಏರ್ ಸಿಸ್ಟಮ್ ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಮೈದಾನ ಪಾತ್ರವಾಗಿದೆ.
2017ರಲ್ಲಿ ಈ ಸಿಸ್ಟಮ್ ಅಳವಡಿಸಲಾಯ್ತು. ಮೈದಾನದ ಅಡಿಯಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಯೂ ಇದೆ. ಹೀಗಾಗಿ ಮಳೆ ನಿಂತ 20 ನಿಮಿಷದೊಳಗೆ ಪಂದ್ಯ ಆರಂಭಿಸಬಹುದು.
ಸ್ಟೇಡಿಯಂ ಚಾವಣಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿದ ವಿಶ್ವದ ಮೊದಲ ಕ್ರೀಡಾಂಗಣ ಎಂಬ ಖ್ಯಾತಿಯೂ ಚಿನ್ನಸ್ವಾಮಿಯದ್ದು.
25 ಟೆಸ್ಟ್ ಪಂದ್ಯಗಳು ನಡೆದ ಭಾರತದ ಕೇವಲ 5 ಸ್ಟೇಡಿಯಂಗಳಲ್ಲಿ ಚಿನ್ನಸ್ವಾಮಿಯೂ ಒಂದು.
photos: X and Instagram
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ