ಭಾರತದ ಮುಂದಿನ ಕೋಚ್‌ ಆಗಬಲ್ಲ ಮೂವರು ದಿಗ್ಗಜರಿವರು

By Jayaraj
Jan 19, 2025

Hindustan Times
Kannada

ಗೌತಮ್‌ ಗಂಭೀರ್‌ ಮುಖ್ಯ ಕೋಚ್‌ ಆದ ನಂತರ, ಭಾರತ ಕ್ರಿಕೆಟ್‌ ತಂಡವು ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ.

ತಂಡವು ತವರಿನಲ್ಲೇ ಕಿವೀಸ್‌ ವಿರುದ್ಧ ವೈಟ್‌ ವಾಶ್‌ ಆದರೆ, ಬಾರ್ಡರ್‌-ಗವಾಸ್ಕರ್‌ ಟ್ರೋಫಿಯೂ ಕಳೆದುಕೊಂಡಿತು.

ಮುಂದೆ ಮಹತ್ವದ ಐಸಿಸಿ ಟೂರ್ನಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಟೀಮ್‌ ಇಂಡಿಯಾ ಆಡುತ್ತಿದೆ. ಆದರೆ, ಇಲ್ಲೂ ವಿಫಲವಾದರೆ, ಗಂಭೀರ್‌ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಗೌತಮ್‌ ಅವರನ್ನು ಮುಖ್ಯ ಕೋಚ್‌ ಹುದ್ದೆಯಿಂದ ಕೆಳಗಿಳಿಸಿದರೆ, ಭಾರತ ತಂಡದ ಮುಂದಿನ ಕೋಚ್‌ ಆಗಬಲ್ಲ ಸಾಮರ್ಥ್ಯ ಇರುವವರು ಯಾರ್ಯಾರು ಎಂಬುದನ್ನು ನೋಡೋಣ.

ವಿವಿಎಸ್‌ ಲಕ್ಷ್ಮಣ್:‌ ಕೋಚ್‌ ಸ್ಥಾನಕ್ಕೆ ಲಕ್ಷ್ಮಣ್‌ ಮೊದಲಿಗರು. ಈಗಾಗಲೇ ಹಲವು ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಕೋಚಿಂಗ್‌ ಮಾಡಿದ ಅನುಭವ ಹೊಂದಿದ್ದಾರೆ.

ಅನಿಲ್‌ ಕುಂಬ್ಳೆ: ಈ ಹಿಂದೆ ಕೋಚ್‌ ಆಗಿ ಯಶಸ್ವಿಯಾಗಿದ್ದ ಕುಂಬ್ಳೆ ಆ ಬಳಿಕ ರಿಸೈನ್‌ ಮಾಡಿದ್ದರು. ಈಗ ಮತ್ತೆ ಕೋಚ್‌ ಆಗುವ ಅವಕಾಶವಿದೆ.

ವಿರೇಂದ್ರ ಸೆಹ್ವಾಗ್: ಈ ಹಿಂದೆಯೇ ಕೋಚಿಂಗ್‌ ಬಯಸಿದ್ದ ಸೆಹ್ವಾಗ್‌ಗೆ ಹಿನ್ನಡೆಯಾಗಿತ್ತು. ಐಪಿಎಲ್‌ನಲ್ಲಿ ತಂಡಕ್ಕೆ ತರಬೇತಿ ಕೊಟ್ಟ ಅನುಭವ ಇವರಿಗಿದೆ.

PTI

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು