ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ನಂತರ ಇದೀಗ ಲೇಡಿ ಡೆಪ್ಯೂಟಿ ಕಮೀಷನ್ ಆಫ್ ಪೊಲೀಸ್ (DSP) ಭಾರತದ ಕ್ರಿಕೆಟ್ಗೆ ಎಂಟ್ರಿಕೊಟ್ಟಿದ್ದಾರೆ.
deepti sharma instagram
2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ಡಿಎಸ್ಪಿಯಾಗಿ ನೇಮಿಸಿತ್ತು.
ಸಿರಾಜ್ ನಂತರ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಕೂಡ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಗೆ ಭಾಜನರಾಗಿದ್ದಾರೆ.
deepti sharma instagram
ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಉತ್ತರ ಪ್ರದೇಶ ಸರ್ಕಾರ ಡಿಎಸ್ಪಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.
deepti sharma instagram
ಜನವರಿ 29ರಂದು ಡಿಎಸ್ಪಿಯಾಗಿ ನೇಮಕಗೊಂಡ ಬಳಿಕ ದೀಪ್ತಿ ಶರ್ಮಾ ತಮ್ಮ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
deepti sharma instagram
ಭಾರತ ತಂಡದ ಪರ ಮೂರು ಸ್ವರೂಪಗಳಲ್ಲಿ 230 ಪಂದ್ಯಗಳನ್ನು ಆಡಿರುವ ದೀಪ್ತಿ 3500ಕ್ಕೂ ಹೆಚ್ಚು ರನ್, 300ಕ್ಕೂ ಹೆಚ್ಚು ವಿಕೆಟ್ ಕಿತ್ತಿದ್ದಾರೆ. ಅವರ ಕೊಡುಗೆಗಾಗಿ ಯುಪಿ ಸರ್ಕಾರವು ಡಿಎಸ್‌ಪಿ ಹುದ್ದೆಯನ್ನು ನೀಡಿ ಗೌರವಿಸಿದೆ.
ದೀಪ್ತಿ ಇತ್ತೀಚೆಗೆ ಬಿಡುಗಡೆಯಾದ ವರ್ಷದ ಐಸಿಸಿ ಮಹಿಳಾ ಏಕದಿನ ತಂಡ ಮತ್ತು ವರ್ಷದ ಐಸಿಸಿ ಮಹಿಳಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು.