ಇಂಗ್ಲೆಂಡ್ ಕ್ರಿಕೆಟ್ ತಂಡವು ಪ್ರಸ್ತುತ ಟಿ20 ಹಾಗೂ ಏಕದಿನ ಸರಣಿಯಲ್ಲಿ ಆಡಲು ಭಾರತ ಪ್ರವಾಸದಲ್ಲಿದೆ.
ಜನವರಿ 22ರಂದು ಮೊದಲ ಟಿ20 ಪಂದ್ಯ ನಡೆದಿದ್ದು, ಇಂಗ್ಲೆಂಡ್ ಸೋಲು ಕಂಡಿತು. ನಾಯಕ ಜೋಸ್ ಬಟ್ಲರ್ 44 ಎಸೆತಗಳಲ್ಲಿ 68 ರನ್ ಗಳಿಸಿದರು.
ಮೈದಾನದಲ್ಲಿ ಸುದೀರ್ಘ ಇನ್ನಿಂಗ್ಸ್ ಆಡುವ ಬಟ್ಲರ್, ತಮ್ಮ ಫಿಟ್‌ನೆಸ್ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಬಟ್ಲರ್ ಅವರ ಪತ್ನಿ ಲೂಯಿಸ್, ಅವರ ಫಿಟ್ನೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಭಾರತ ಪ್ರವಾಸಕ್ಕೆ ಬರುವ ಮೊದಲು, ಬಟ್ಲರ್ ತಮ್ಮ ಪತ್ನಿಯೊಂದಿಗೆ ಫಿಟ್‌ನೆಸ್ ಕುರಿತಾಗಿ ಕೆಲಸ ಮಾಡಿದ್ದರು. ಅದರ ವಿಡಿಯೊಗಳನ್ನು ಲೆವಿಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೋಸ್ ಬಟ್ಲರ್ ಅವರ ಪತ್ನಿ ಲೂಯಿಸ್ ಬಟ್ಲರ್, ವೃತ್ತಿಪರ ಪೈಲೇಟ್ಸ್ ತರಬೇತುದಾರರಾಗಿದ್ದಾರೆ. ಬಟ್ಲರ್‌ಗೆ ಮಾತ್ರವಲ್ಲದೆ ಅನೇಕರಿಗೆ ಫಿಟ್‌ನೆಸ್ ತರಬೇತಿ ನೀಡುತ್ತಾರೆ.
ಪೈಲೇಟ್ಸ್ ಒಂದು ವ್ಯಾಯಾಮವಾಗಿದ್ದು, ಅದು ಮನಸ್ಸು ಮತ್ತು ಇಡೀ ದೇಹವನ್ನು ಬಲಪಡಿಸಲು ಮತ್ತು ಸಕ್ರಿಯಗೊಳಿಸಲು ನೆರವಾಗುತ್ತದೆ.