ಬಾರ್ಡರ್-ಗವಾಸ್ಕರ್ ಸರಣಿಯ ಪಿಚ್ ರೇಟಿಂಗ್ ಪ್ರಕಟ
By Jayaraj
Jan 08, 2025
Hindustan Times
Kannada
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು ಇತ್ತೀಚೆಗೆ ಮುಕ್ತಾಯಗೊಂಡಿತು.
ಇದೀಗ ಪ್ರತಿ ಟೆಸ್ಟ್ ಪಂದ್ಯಗಳು ನಡೆದ ಮೈದಾನದ ಪಿಚ್ ರೇಟಿಂಗ್ ಅನ್ನು ಐಸಿಸಿ ಬುಧವಾರ (ಜ.8) ಬಿಡುಗಡೆ ಮಾಡಿದೆ
AP/PTI
ಐದು ಪಿಚ್‌ಗಳಲ್ಲಿ ನಾಲ್ಕು ಪಿಚ್‌ಗಳು "ಅತ್ಯುತ್ತಮ(very good)" ಎಂದು ಉನ್ನತ ರೇಟಿಂಗ್ ಗಳಿಸಿದೆ. ಇದು ಐಸಿಸಿ ಪಿಚ್ ರ್‍ಯಾಂಕಿಂಗ್ ಮಾಪಕದ ಅತ್ಯಧಿಕ ಶ್ರೇಯಾಂಕವಾಗಿದೆ.
ಮೊದಲ 4 ಪಂದ್ಯಗಳು ನಡೆದ ಪರ್ತ್, ಅಡಿಲೇಡ್ ಓವಲ್, ಗಬ್ಬಾ ಮತ್ತು ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಪಿಚ್‌ಗಳಿಗೆ 'ಅತ್ಯುತ್ತಮ' ಎಂದು ರೇಟ್ ನೀಡಲಾಗಿದೆ.
5ನೇ ಟೆಸ್ಟ್ ನಡೆದ ಸಿಡ್ನಿ ಪಿಚ್‌ಗೆ 'ತೃಪ್ತಿಕರ(satisfactory)'ಎಂದು ರೇಟಿಂಗ್ ನೀಡಲಾಗಿದೆ. ಐಸಿಸಿ ಮಾನದಂಡದ ಪ್ರಕಾರ ಇದು ಎರಡನೇ ಅತಿ ಹೆಚ್ಚು ರೇಟಿಂಗ್ ಆಗಿದೆ.
PTI/AP
2023ರಲ್ಲಿ, ಐಸಿಸಿ ಪಿಚ್ ರೇಟಿಂಗ್ ವ್ಯವಸ್ಥೆಯನ್ನು ಪರಿಷ್ಕರಿಸಿತು. ಆ ಮೊದಲು ಇದ್ದ ಆರು ವಿಭಾಗಗಳನ್ನು ನಾಲ್ಕಕ್ಕೆ ಇಳಿಸಿತು.
PTI/AP
ಈಗ ಅತ್ಯುತ್ತಮ, ತೃಪ್ತಿಕರ, ಅತೃಪ್ತಿಕರ ಮತ್ತು ಅಯೋಗ್ಯ ಎಂಬ ನಾಲ್ಕು ರೇಟಿಂಗ್‌ಗಳಿವೆ.
AP/PTI
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ 3-1 ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು.
ಶ್ರೀಲಂಕಾ ವಿರುದ್ಧ ಭಾರತದ 317 ರನ್ ಗೆಲುವಿಗೆ 2 ವರ್ಷ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ