ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ಗಳಿಂದ ಗೆದ್ದು ಭಾರತ ತಂಡ ಅಭಿಯಾನ ಆರಂಭಿಸಿದೆ.
ಕೌಲಾಲಂಪುರ್ನಲ್ಲಿ ನಡೆದ ತಮ್ಮ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಕೇವಲ 26 ಎಸೆತಗಳಲ್ಲೇ ಗೆಲುವಿನ ನಗೆ ಬೀರಿದೆ. ಭಾರತೀಯ ಬೌಲರ್ಸ್ ದಾಳಿಗೆ ತತ್ತರಿಸಿದ ವಿಂಡೀಸ್ ಸುಲಭ ತುತ್ತಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, 13.2 ಓವರ್ಗಳಲ್ಲಿ 44 ರನ್ಗಳಿಗೆ ಆಲೌಟ್ ಆಯಿತು. ಪಾರುಣಿಕ ಸಿಸೋಡಿಯಾ 3 ವಿಕೆಟ್, ಜೋತಿಷಾ, ಆಯುಷಿ ಶುಕ್ಲಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಈ ಗುರಿ ಬೆನ್ನಟ್ಟಿದ ಭಾರತ, ಭರ್ಜರಿ ಬ್ಯಾಟಿಂಗ್ ನಡೆಸಿತು. ಕೇವಲ 4.2 ಓವರ್ಗಳು ಅಂದರೆ 26 ಎಸೆತಗಳಲ್ಲೇ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಭಾರತ ಪರ ಸಾನಿಕಾ ಚಲ್ಕೆ 18, ಕಮಲಿನಿ 16 ರನ್ ಗಳಿಸಿ ಅಜೇಯರಾದರು.
ಪಂದ್ಯದಲ್ಲಿ 2 ಓವರ್ಗಳಲ್ಲಿ ಕೇವಲ 5 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ ವಿಜೆ ಜೋಶಿತಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
ಮೊದಲ ಪಂದ್ಯದಲ್ಲಿ ಗೆದ್ದ ಭಾರತ ತಂಡ, ಗ್ರೂಪ್ ಎ ಅಂಕಪಟ್ಟಿಯಲ್ಲಿ 2 ಅಂಕ ಪಡೆದು ಅಗ್ರಸ್ಥಾನದಲ್ಲಿದೆ. +8.646 ರನ್ರೇಟ್ ಹೊಂದಿದೆ.
ಭಾರತ ತಂಡದ ಮುಂದಿನ ಪಂದ್ಯ ಜನವರಿ 21ರಂದು ನಡೆಯಲಿದೆ. ಮಲೇಷ್ಯಾ ತಂಡದ ವಿರುದ್ಧ ಕಣಕ್ಕಿಳಿಯಲಿದೆ.