ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತದ ದಾಖಲೆ, ಇಷ್ಟೊಂದು ಕಳಪೆನಾ?

By Prasanna Kumar P N
Dec 31, 2024

Hindustan Times
Kannada

ಮೆಲ್ಬೋರ್ನ್​​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 184 ರನ್​ಗಳ ಅಂತರದಿಂದ ಸೋಲು ಕಂಡಿತು.

ಇದರೊಂದಿಗೆ ಒಂದು ಟೆಸ್ಟ್ ಬಾಕಿ ಇರುವಂತೆಯೇ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಸಾಧಿಸಿದೆ.

ಇದೀಗ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಸಿದ್ದವಾಗುತ್ತಿದೆ.

ಹಾಗಿದ್ದರೆ ಸಿಡ್ನಿ ಮೈದಾನದಲ್ಲಿ ಟೀಮ್ ಇಂಡಿಯಾ ದಾಖಲೆ ಹೇಗಿದೆ? ಇಲ್ಲಿದೆ ವಿವರ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಇದುವರೆಗೂ 13 ಟೆಸ್ಟ್​​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಕಳಪೆ ದಾಖಲೆ ಹೊಂದಿದೆ.

ಭಾರತ ಈ ಮೈದಾನದಲ್ಲಿ ಕೊನೆಯದಾಗಿ 2021ರಲ್ಲಿ ಆಡಿತ್ತು. ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 

ಈ ಐಕಾನಿಕ್ ಮೈದಾನದಲ್ಲಿ ಭಾರತ ಐದು ಪಂದ್ಯಗಳನ್ನು ಸೋತಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಒಂದೇ ಒಂದು ಗೆಲುವು ಮಾತ್ರ ಕಂಡಿದೆ. ಅದು ಕೂಡ 1978ರಲ್ಲಿ.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ