ಟಾಸ್ ಸೋಲಿನಲ್ಲೂ ಕೆಟ್ಟ ದಾಖಲೆ ಬರೆದ ಭಾರತ!
By Prasanna Kumar PN
Feb 12, 2025
Hindustan Times
Kannada
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಅಂತಿಮ ಏಕದಿನದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಕಳಪೆ ದಾಖಲೆ ಬರೆದಿದೆ.
ಪ್ರಸ್ತುತ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ರೋಹಿತ್ ಶರ್ಮಾ ಪಡೆ ಟಾಸ್ ಗೆಲ್ಲುವಲ್ಲಿ ವಿಫಲವಾಗಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋಲುವುದರೊಂದಿಗೆ ಅನಗತ್ಯ ದಾಖಲೆ ನಿರ್ಮಿಸಿದೆ.
ಇದರೊಂದಿಗೆ ಭಾರತ ಸತತ 10 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದೆ. 2ನೇ ಬಾರಿ ಅತಿ ಹೆಚ್ಚು ಟಾಸ್ ಸೋತ ಕುಖ್ಯಾತಿಗೆ ಒಳಗಾಗಿದೆ.
ಈ ಹಿಂದೆ 2011ರ ಮಾರ್ಚ್ನಿಂದ 2013ರ ಆಗಸ್ಟ್ ಮಧ್ಯೆ ಸತತ 11 ಪಂದ್ಯಗಳಲ್ಲಿ ಭಾರತ ಟಾಸ್ ಸೋತಿತ್ತು.
ಪ್ರಸ್ತುತ ಭಾರತ ಕೊನೆಯ ಬಾರಿಗೆ ಟಾಸ್ ಗೆದ್ದಿದ್ದು 2023ರ ಏಕದಿನ ವಿಶ್ವಕಪ್‌ನಲ್ಲಿ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ.
ಭಾರತ ತನ್ನ ಮುಂದಿನ ಪಂದ್ಯವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದ್ದು, ಅಂದಾದರೂ ಟಾಸ್ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ.
IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ