139 ವರ್ಷ ಹಳೆಯ ದಾಖಲೆ ಮುರಿಯಲು ಸಜ್ಜಾದ ಭಾರತ

AFP

By Jayaraj
Dec 26, 2024

Hindustan Times
Kannada

ಎಂಸಿಜಿಯಲ್ಲಿ ಇಂದಿನಿಂದ (ಡಿಸೆಂಬರ್ 26) ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿದೆ.

AFP

ಪಂದ್ಯದಲ್ಲಿ ಭಾರತ ತಂಡವು ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದೆ.

ಒಂದು ವೇಳೆ ಟೀಮ್ ಇಂಡಿಯಾ 4ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, 139 ವರ್ಷಗಳಲ್ಲಿ ಎಂಸಿಜಿಯಲ್ಲಿ ಸತತ 3 ಗೆಲುವು ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

AFP

ಈ ಹಿಂದಿನ ಎರಡು ಪ್ರವಾಸದಲ್ಲಿ, ಅಂದರೆ 2018 ಮತ್ತು 2020ರಲ್ಲಿ ಭಾರತ ತಂಡವು ಎಂಸಿಜಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

AFP

ಇಲ್ಲಿಯವರೆಗೆ‌, ಇಂಗ್ಲೆಂಡ್ ತಂಡ ಮಾತ್ರವೇ ಎಂಸಿಜಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಟೆಸ್ಟ್ ಪಂದ್ಯಗಳನ್ನು (1882, 1885, 1885) ಗೆದ್ದಿದೆ.

AFP

ಇದರ ಹೊರತಾಗಿ ಇಂಗ್ಲೆಂಡ್ ತಂಡ 5 ಬಾರಿ ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ಸತತ ಎರಡು ಗೆಲುವು ದಾಖಲಿಸಿದೆ.

ಮತ್ತೊಂದೆಡೆ, ಭಾರತ ಕೂಡಾ ಎರಡು ಬಾರಿ (1977-81, 2018-20) ಈ ಸಾಧನೆ ಮಾಡಿದ್ದರೆ, ದಕ್ಷಿಣ ಆಫ್ರಿಕಾ ಒಮ್ಮೆ ಸತತ ಎರಡು ಗೆಲುವು ದಾಖಲಿಸಿದೆ.

AFP

ಒಂದು ವೇಳೆ ಈ ಬಾರಿ ನಾಲ್ಕನೇ ಟೆಸ್ಟ್‌ ಗೆದ್ದರೆ, ಭಾರತವು ಇಂಗ್ಲೆಂಡ್‌ ಬಳಿಕ ಆಸೀಸ್‌ ತಂಡವನ್ನು ಎಂಸಿಜಿಯಲ್ಲಿ ಸತತ 3 ಬಾರಿ ಸೋಲಿಸಿದ ಎರಡನೇ ತಂಡವಾಗಲಿದೆ.

AP

ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?