ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
By Prasanna Kumar P N
Dec 07, 2024
Hindustan Times
Kannada
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 180 ರನ್ ಗಳಿಸಿತ್ತು. ಇದೀಗ ಆಸೀಸ್ ಭರ್ಜರಿ ಮುನ್ನಡೆ ಸಾಧಿಸಿದೆ.
ಟ್ರಾವಿಸ್ ಹೆಡ್ ಆಕರ್ಷಕ ಶತಕ ಸಿಡಿಸಿ ಮುನ್ನಡೆ ಕಾರಣರಾಗಿದ್ದಾರೆ. ಈ ಶತಕದೊಂದಿಗೆ ಹಲವು ದಾಖಲೆ ಬರೆದಿದ್ದಾರೆ. ಅವರು 141 ಎಸೆತಗಳಲ್ಲಿ 140 ರನ್ ಗಳಿಸಿ ಔಟಾದರು.
ಟ್ರಾವಿಸ್ ಹೆಡ್ ಅವರು ಹಗಲು ರಾತ್ರಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಶತಕವನ್ನು ದಾಖಲಿಸಿದ್ದಾರೆ. ವೇಗದ ಶತಕ ಸಿಡಿಸಿದವರ ಪಟ್ಟಿ ಹೀಗಿದೆ.
111 ಎಸೆತ - ಟ್ರಾವಿಸ್ ಹೆಡ್ vs ಭಾರತ, ಅಡಿಲೇಡ್ 2024
112 ಎಸೆತ - ಟ್ರಾವಿಸ್ ಹೆಡ್ vs ಇಂಗ್ಲೆಂಡ್, ಹೋಬಾರ್ಟ್ 2022
125 ಎಸೆತ - ಟ್ರಾವಿಸ್ ಹೆಡ್ vs ವೆಸ್ಟ್ ಇಂಡೀಸ್, ಅಡಿಲೇಡ್ 2022
139 ಎಸೆತ - ಜೋ ರೂಟ್ vs ವೆಸ್ಟ್ ಇಂಡೀಸ್, ಎಡ್ಜ್‌ಬಾಸ್ಟನ್ 2017
140 ಎಸೆತ - ಅಸದ್ ಶಫೀಕ್ vs ಆಸ್ಟ್ರೇಲಿಯಾ, ಬ್ರಿಸ್ಬೇನ್ 2016
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ