ಏಕದಿನದಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ ದಾಖಲೆ; ಯಾರು ಮೇಲುಗೈ?
By Prasanna Kumar P N Feb 04, 2025
Hindustan Times Kannada
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಟಿ20ಐ ಸರಣಿ ಗೆದ್ದಿರುವ ವಿಶ್ವಾಸ ಹೊಂದಿರುವ ಭಾರತ ತಂಡಕ್ಕೆ, ಒಡಿಐ ಸರಣಿಯನ್ನೂ ಗೆಲ್ಲುವ ಲೆಕ್ಕಾಚಾರದಲ್ಲಿದೆ.
ಮತ್ತೊಂದೆಡೆ, ಚುಟುಕು ಸರಣಿಯನ್ನು 4-1ರಲ್ಲಿ ಕಳೆದುಕೊಂಡಿರುವ ಇಂಗ್ಲೆಂಡ್, ಏಕದಿನ ಸಿರೀಸ್ನಲ್ಲಿ ತಿರುಗೇಟು ನೀಡಿ ಲೆಕ್ಕಾ ಚುಕ್ತಾ ಮಾಡಲು ಭಾರೀ ಕಸರತ್ತು ನಡೆಸುತ್ತಿದೆ.
ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಫೆಬ್ರವರಿ 6ರಂದು ನಡೆಯಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದು, ಹಿರಿಯ ಆಟಗಾರರು ಮೆನ್ ಇನ್ ಬ್ಲ್ಯೂಗೆ ಮರಳಿದ್ದಾರೆ. ಆದರೆ ಇಂಗ್ಲೆಂಡ್ ತಂಡದಲ್ಲಿ ಒಂದೆರೆಡು ಬದಲಾವಣೆ ಮಾತ್ರ ಕಾಣಬಹುದು.
ಹಾಗಾದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡೂ ತಂಡಗಳು ಎಷ್ಟು ಸಲ ಮುಖಾಮುಖಿಯಾಗಿವೆ, ಯಾವ ತಂಡ ಮೇಲುಗೈ ಸಾಧಿಸಿದೆ ಎನ್ನುವುದನ್ನು ಈ ಮುಂದೆ ತಿಳಿಯೋಣ.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟು 107 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್ ಇಂಡಿಯಾ ಅಧಿಕ ಪಂದ್ಯಗಳಲ್ಲಿ ಗೆಲುವು ಕಂಡಿದೆ.
107 ಏಕದಿನಗಳ ಮುಖಾಮುಖಿಯಲ್ಲಿ ರೋಹಿತ್ ಪಡೆ 58ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 44ರಲ್ಲಿ ಜಯದ ನಗೆ ಬೀರಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ರದ್ದಾಗಿದ್ದರೆ, ಎರಡು ಪಂದ್ಯಗಳು ಟೈ ಆಗಿವೆ.
ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ತವರಿನಲ್ಲಿ 34 ಪಂದ್ಯಗಳಲ್ಲಿ ಗೆದ್ದಿದೆ. ಮತ್ತೊಂದೆಡೆ ಭಾರತದ ನೆಲದಲ್ಲಿ ಇಂಗ್ಲೆಂಡ್ ದಾಖಲೆಯೂ ಉತ್ತಮವಾಗಿದ್ದು, ಇಲ್ಲಿ 23 ಗೆಲುವು ದಾಖಲಿಸಿದೆ.