ಭಾರತ vs ಇಂಗ್ಲೆಂಡ್ ಸರಣಿಯ ಸಂಪೂರ್ಣ ವೇಳಾಪಟ್ಟಿ

By Jayaraj
Jan 14, 2025

Hindustan Times
Kannada

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಂತರ ಭಾರತ ಕ್ರಿಕೆಟ್‌ ತಂಡವು ಮುಂದೆ ಇಂಗ್ಲೆಂಡ್ ವಿರುದ್ಧ ವೈಟ್‌ ಬಾಲ್‌ ಸರಣಿಯಲ್ಲಿ ಆಡಲಿದೆ.

ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 5 ಟಿ20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಆಡಲಿದೆ. 

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಎರಡು ಸರಣಿಗಳ ವೇಳಾಪಟ್ಟಿ ಮತ್ತು ಸಮಯ ತಿಳಿಯೋಣ.

ಜನವರಿ 22ರಿಂದ ಫೆಬ್ರುವರಿ 2ರವರೆಗೆ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯವು ಕೋಲ್ಕತ್ತಾದಲ್ಲಿ ಮತ್ತು ಎರಡನೇ ಪಂದ್ಯ ಜನವರಿ 25ರಂದು ಚೆನ್ನೈನಲ್ಲಿ ನಡೆಯಲಿದೆ.

ಮೂರನೇ ಪಂದ್ಯ ಜ.28ರಂದು ರಾಜ್‌ಕೋಟ್‌ನಲ್ಲಿ, ನಾಲ್ಕನೇ ಪಂದ್ಯ ಜ.31ರಂದು ಪುಣೆಯಲ್ಲಿ ಮತ್ತು ಐದನೇ ಪಂದ್ಯ ಫೆ.02ರಂದು ಮುಂಬೈನಲ್ಲಿ ನಡೆಯಲಿದೆ. 

ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿವೆ.

ಏಕದಿನ ಸರಣಿಯು ಫೆಬ್ರುವರಿ 6ರಿಂದ  12ರವರೆಗೆ ನಡೆಯಲಿದೆ. ಮೊದಲ ಪಂದ್ಯ ಫೆಬ್ರುವರಿ 6ರಂದು ನಾಗ್ಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಫೆಬ್ರವರಿ 9ರಂದು ಕಟಕ್‌ನಲ್ಲಿ ನಡೆಯಲಿದೆ.

ಸರಣಿಯ ಮೂರನೇ ಏಕದಿನ ಪಂದ್ಯ ಫೆ.12ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಪ್ರಾರಂಭವಾಗಲಿವೆ.

Photo: Instagram and Agencies

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು